ಮುಂಬೈ, ಜ 6 (Daijiworld News/MB) : ಚಾಪಕ್ ಸಿನೆಮಾದ ಪ್ರಚಾರದಲ್ಲೆ ಬಿಝಿಯಾಗಿರುವ ನಟಿ ದೀಪಿಕಾ ಪಡುಕೋಣೆಯನ್ನು ಸಂದರ್ಶನದಲ್ಲಿ ಪತ್ರಕರ್ತರೊಬ್ಬರು ನೀವು ಗರ್ಭಿಣಿಯೇ ಎಂದು ಕೇಳಿದಾಗ ಶಾಂತರಾಗಿಯೇ ಖಡಕ್ ಉತ್ತರ ನೀಡಿದ್ದಾರೆ.
ಪತ್ರಕರ್ತರು ನೀವು ಗರ್ಭಿಣಿಯೇ ಎಂದು ಕೇಳಿದಾಗ, "ನಾನು ಗರ್ಭಿಣಿಯಂತೆ ಕಾಣುತ್ತೇನೆಯೇ? ನಾನು ಯಾವಾಗ ಗರ್ಭಿಣಿಯಾಗಲಿ ಎಂದು ನೀವು ನಿರ್ಧಾರ ಮಾಡಿ. ನೀವು ಅನುಮತಿ ನೀಡಿದರೆ ನಾನು ಗರ್ಭಿಣಿಯಾಗುವ ಪ್ಲ್ಯಾನ್ ಮಾಡುತ್ತೇನೆ. ನಾನು ಗರ್ಭಿಣಿ ಆದರೆ ನೀವು ಒಂಬತ್ತು ತಿಂಗಳಲ್ಲೆ ಮಗುವನ್ನು ನೋಡಬಹುದು ಎಂದು ಹೇಳಿದ್ದಾರೆ.
ರಣವೀರ್ ಸಿಂಗ್ ಪತ್ನಿ ದೀಪಿಕಾ ಪಡುಕೋಣೆಯವರ ಹುಟ್ಟುಹಬ್ಬದ ದಿನದಂದು ದೀಪಿಕಾ ಅವರ ಹಳೆಯ ಫೋಟೋ ಹಾಕಿ ಶುಭಕೋರಿದ್ದು ಮಗುವಿನ ಇಮೋಜಿಯನ್ನು ಹಾಕಿದ್ದಾರೆ. ಆ ಬಳಿಕ ದೀಪಿಕಾ ಅವರು ಗರ್ಭಿಣಿ ಎಂಬ ಗಾಸಿಪ್ಗಳು ಹರಡುತ್ತಿದೆ.
ಈ ಕುರಿತು ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ ದೀಪಿಕಾ, "ನಮಗೆ ಇದರಿಂದಾಗಿ ಯಾವುದೇ ಆಶ್ಚರ್ಯವಾಗಿಲ್ಲ. ನಮಗೆ ಮಕ್ಕಳೆಂದರೆ ಇಷ್ಟ. ಆದರೆ ಇಷ್ಟು ಬೇಗ ಮಕ್ಕಳು ಬೇಡವೆಂದು ತೀರ್ಮಾನ ಮಾಡಿದ್ದೇವೆ. ನಮಗೆ ನಮ್ಮ ಕೆರಿಯರ್ನ ಮೇಲೆ ಗಮನವಿಟ್ಟಿದ್ದೇವೆ ಎಂದು ಹೇಳಿದ್ದಾರೆ.