ಮಂಗಳೂರು, ಜ 04 ( Dajiworld News/MB) : ಜಿ.ಆರ್.ಕೆ ಲಾಂಛನದಲ್ಲಿ ತಯಾರಾದ ಎ.ವಿ ಜಯರಾಜ್ ನಿರ್ದೇಶನದ ಗೌರಿ ಹೊಳ್ಳ ಮತ್ತು ಸುಹಾಸ್ ಹೊಳ್ಳ ನಿರ್ಮಾಣದ ‘ಕುದ್ಕನ ಮದ್ಮೆ’ ತುಳು ಸಿನಿಮಾ ಮಂಗಳೂರಿನ ಜ್ಯೋತಿ ಚಿತ್ರಮಂದಿರದಲ್ಲಿ ಬಿಡುಗಡೆಗೊಂಡಿದೆ.
ಚಲನಚಿತ್ರ ನಿರ್ಮಾಪಕ ನಿರ್ದೇಶಕ ಪ್ರಕಾಶ್ ಪಾಂಡೇಶ್ವರ್ ಅವರು ದೀಪ ಬೆಳಗಿಸಿ ಸಿನಿಮಾವನ್ನು ಬಿಡುಗಡೆಗೊಳಿಸಿದರು. 2020ರ ಸಾಲಿನಲ್ಲಿ ತೆರೆಕಾಣುವ ಮೊದಲ ತುಳು ಸಿನಿಮಾ 'ಕುದ್ಕನ ಮದ್ಮೆ' ಯಶಸ್ಸನ್ನು ದಾಖಲಿಸಲಿ ಎಂದು ಶುಭ ಹಾರೈಸಿದರು.
ಟೈಂಸ್ ಆಫ್ ಇಂಡಿಯಾ ಪತ್ರಿಕೆಯ ಪ್ರಸರಣಾಧಿಕಾರಿ ಕದ್ರಿ ನವನೀತ ಶೆಟ್ಟಿ ಮುಖ್ಯ ಅತಿಥಿಯಾಗಿ ಆಗಮಿಸಿ, 'ಕುದ್ಕನ ಮದ್ಮೆ' ಸಿನಿಮಾದಲ್ಲಿ ಘಟಾನುಘಟಿ ಕಲಾವಿದರಿದ್ದಾರೆ. ಹೀಗಾಗಿ ಹಾಸ್ಯಕ್ಕೆ ಏನೂ ಕೊರತೆ ಇರಲಾರದು. ಸಿನಿಮಾ ಯಶಸ್ವಿ ಪ್ರದರ್ಶನ ಕಾಣಲಿ ಎಂದು ಶುಭ ಹಾರೈಸಿದರು.
ಸಮಾರಂಭದಲ್ಲಿ ಚಲನ ಚಿತ್ರ ನಿರ್ಮಾಪಕರಾದ ಆರ್. ಧನರಾಜ್, ಶರತ್ ಕದ್ರಿ, ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ, ಭೋಜರಾಜ ವಾಮಂಜೂರು, ಮಹೇಶ್ ಮೂರ್ತಿ ಸುರತ್ಕಲ್, ನಿರ್ಮಾಪಕರಾದ ಗೌರಿ ಆರ್ ಹೊಳ್ಳ, ಮಹಾಬಲೇಶ್ವರ ಹೊಳ್ಳ, ಸುಬ್ರಹ್ಮಣ್ಯ ಹೊಳ್ಳ, ನಿರ್ದೇಶಕ ಎ.ವಿ ಜಯರಾಜ್, ಸುಹಾಸ್ ಹೊಳ್ಳ, ಶಶಿರಾಜ್ ಕಾವೂರು, ಆನಂದ ಶೆಟ್ಟಿ ಅಡ್ಯಾರ್, ಶೀತಲ್ ನಾಯಕ್, ಜೀವನ್ ಉಳ್ಳಾಲ್ ರಮೇಶ್ ರೈ ಕುಕ್ಕುವಳ್ಳಿ, ಕುಮಾರ್ ಬಂಗೇರ, ಗೌತಮ್ ವಿ ಶೆಟ್ಟಿ, ಶ್ರೀಶ ಭಂಡಾರಿ, ಚಂದ್ರಾವತಿ ವಸಂತ್, ಸುಧನ್ ಶ್ರೀಧರ್, ಪೃಥ್ವಿ ಅಂಬರ್, ಉದಯ ಆಳ್ವ ಸುರತ್ಕಲ್, ಯಶವಂತ ಶೆಟ್ಟಿ ಕೃಷ್ಣಾಪುರ, ಅರುಣ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಗಣೇಶ್ ಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.
'ಕುದ್ಕನ ಮದ್ಮೆ' ಸಿನಿಮಾ ಮಂಗಳೂರಿನಲ್ಲಿ ಜ್ಯೋತಿ, ಬಿಗ್ ಸಿನಿಮಾಸ್, ಪಿ.ವಿ.ಆರ್, ಸಿನಿಪೊಲೀಸ್, ಉಡುಪಿಯಲ್ಲಿ ಅಲಂಕಾರ್, ಮಣಿಪಾಲದಲ್ಲಿ ಐನಾಕ್ಸ್, ಪುತ್ತೂರಿನಲ್ಲಿ ಅರುಣಾ, ಕಾಸರಗೋಡಿನಲ್ಲಿ ಕೃಷ್ಣಾ ಮೊದಲಾದ ಥಿಯೇಟರ್ನಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.