ಮುಂಬೈ, ಜ.03 (Daijiworld News/PY) : ಭಾರತ ಕ್ರಿಕೆಟ್ ತಂಡದ ಆಟಗಾರ ಕೆ. ಎಲ್ ರಾಹುಲ್ ಹಾಗೂ ಸುನೀಲ್ ಶೆಟ್ಟಿ ಅವರ ಪುತ್ರಿ ಅಥಿಯಾ ಶೆಟ್ಟಿ ಇವರಿಬ್ಬರೂ ಜೋಡಿಹಕ್ಕಿಗಳಾಗಿದ್ದಾರೆ ಎಂಬ ಗಾಸಿಪ್ ದಟ್ಟವಾಗಿ ಕೇಳಿಬರುತ್ತಿದ್ದು ಇವರಿಬ್ಬರು ಡೇಟಿಂಗ್ನಲ್ಲಿದ್ದಾರೆ ಎಂಬ ವಿಚಾರ ಆಗಾಗ ಸುದ್ದಿಯಾಗುತ್ತಿರುತ್ತದೆ. ಈ ವಿಚಾರವಾಗಿ ಅಥಿಯಾ ಶೆಟ್ಟಿ ತಂದೆ ಸುನೀಲ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.
ಸಂದರ್ಶನವೊಂದರಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿ ಮಾತನಾಡಿದ ಸುನೀಲ್, ಮಗಳು ಅಥಿಯಾ ರಾಹುಲ್ ಜೊತೆ ಡೇಟಿಂಗ್ ಮಾಡುತ್ತಿದ್ದಾಳೆ, ಮಗ ಅಹನ್ ಶೆಟ್ಟಿ ಕೂಡಾ ತಾನಿಯಾ ಶ್ರಾಫ್ ಜೊತೆ ಅನೇಕ ವರ್ಷಗಳಿಂದ ಸಂಬಂಧ ಹೊಂದಿದ್ದಾರೆ. ಈ ವಿಚಾರವಾಗಿ ನನಗೂ ಹಾಗೂ ನನ್ನ ಪತ್ನಿಗೂ ಯಾವುದೇ ಸಮಸ್ಯೆಯಿಲ್ಲ, ನಮ್ಮ ಮಕ್ಕಳನ್ನು ನಾವು ಪ್ರೀತಿಸುತ್ತೇವೆ, ಅವರು ತುಂಬಾ ವಿನಮ್ರರು ಹಾಗೂ ಅದ್ಬುತ ಕುಟುಂಬದಿಂದ ಬಂದವರಾಗಿದ್ದಾರೆ. ಬದಲಾಗುತ್ತಿರುವ ಕಾಲದಲ್ಲಿ, ಪೋಷಕರು ತಮ್ಮ ಮಕ್ಕಳೊಂದಿಗೆ ಮಾತ್ರವಲ್ಲದೆ, ಮಕ್ಕಳ ಇತರರೊಂದಿಗೂ ಸ್ನೇಹಿತರಾಗುವುದು ಬಹಳ ಮುಖ್ಯ ಎಂದರು.
ಥೈಲ್ಯಾಂಡಿನಲ್ಲಿ ಹೊಸವರ್ಷವನ್ನು ತಮ್ಮ ಸ್ನೇಹಿತರೊಂದಿಗೆ ಆಚರಿಸಿದ ಅಥಿಯಾ ಹಾಗೂ ರಾಹುಲ್ ಸಾಮಾಜಿಕ ಜಾಲತಾನಗಳಲ್ಲಿ ಫೋಟೋವನ್ನು ಪೋಸ್ಟ್ ಮಾಡಿ ಮತ್ತೆ ಸುದ್ದಿಯಾಗುತ್ತಿದ್ದಾರೆ. ರಾಹುಲ್ ಹಾಗೂ ಅಥಿಯಾ ನಾವು ಪ್ರೀತಿಸುತ್ತೀದ್ದೇವೆ ಎಂದು ಎಲ್ಲಿಯೂ ಹೇಳಿಲ್ಲ, ಆದರೆ ಸಧ್ಯ ಡೇಟಿಂಗ್ನಲ್ಲಿದ್ದಾರೆ ಅನ್ನೋದಂತು ಗ್ಯಾರಂಟಿ.