ಮಂಗಳೂರು, ಜ 02 (Daijiworld News/MB) : ಕೋಸ್ಟಲ್ವುಡ್ನಲ್ಲಿ ಈ ವರ್ಷ ಬಿಡುಗಡೆಯಾದ ಹೆಚ್ಚಿನ ಸಿನೆಮಾಗಳು ನಿರೀಕ್ಷೆಯಷ್ಟು ಫಲ ನೀಡಿಲ್ಲದಿದ್ದರು, ಈ ವರ್ಷ 27 ಸಿನೆಮಾಗಳು ತೆರೆ ಕಾಣಲು ಸಿದ್ದವಾಗಲಿದ್ದು ಹೊಸತನವನ್ನು ಹೊತ್ತು ಬರಲಿದೆ ಎಂಬ ನಿರೀಕ್ಷೆ ಇದೆ.
2019ರಲ್ಲಿ ಕೋಸ್ಟಲ್ ವುಡ್ನಲ್ಲಿ ಕೆಲವು ಸಿನೆಮಾಗಳನ್ನು ಹೊರತು ಪಡಿಸಿ ಹೆಚ್ಚಿನ ಸಿನೆಮಾಗಳು ನಿರೀಕ್ಷೆ ಮಾಡಿದಷ್ಟು ಹಿಟ್ ಆಗಿರಲಿಲ್ಲ. 12 ತಿಂಗಳಲ್ಲಿ ಕೇವಲ 10 ಸಿನೆಮಾಗಳು ತೆರೆ ಕಂಡಿದ್ದು ಈ ಹಿಂದಿನ ಎಲ್ಲಾ ವರ್ಷಕ್ಕಿಂತ ಅತಿ ಕಡಿಮೆ ಸಿನೆಮಾ ಬಿಡುಗಡೆಯಾದ ವರ್ಷ ಇದಾಗಿದೆ.
ಈ ವರ್ಷದ ಮೊದಲ ತಿಂಗಳಲ್ಲೆ 2 ಸಿನೆಮಾಗಳು ತೆರೆ ಕಾಣಲಿದ್ದು ಸಿನಿ ಪ್ರಿಯರ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ನಾಳೆ "ಕುದ್ಕನ ಮದ್ಮೆ" ಹಾಗೂ 10ರಂದು "ರಡ್ಡ್ ಎಕ್ರೆ" ಸಿನೆಮಾ ಬಿಡುಗಡೆಯಾಗಲಿದ್ದು ಮುಂದೆ ಒಟ್ಟು 27 ಸಿನೆಮಾಗಳು ಬಿಡುಗಡೆಯಾಗಲಿದೆ.
ಎ. 3ಕ್ಕೆ ಸೂರಜ್ ಶೆಟ್ಟಿ ನಿರ್ದೇಶನದ "ಇಂಗ್ಲೀಷ್" ಸಿನೆಮಾ ಬಿಡುಗಡೆಯಾಗುವುದು ಬಹುತೇಕ ಪಕ್ಕಾ ಆಗಿದೆ. ಅದಾದ ಬಳಿಕ ರಾಮ್ ಶೆಟ್ಟಿ ನಿರ್ದೇಶನದ "ಏರೆಗಾವುಯೆ ಕಿರಿಕಿರಿ" ಬರಲಿದೆ. ಬಳಿಕ ಡಾ| ಸುರೇಶ್ ಚಿತ್ರಾಪುರ ನಿರ್ದೇಶನದ ಇಲ್ಲೊಕ್ಕೆಲ್’ ಸಿನೆಮಾ, ಮಹೇಂದ್ರ ಕುಮಾರ್ ಅವರ "ಕಾರ್ನಿಕೆದ ಕಲ್ಲುರ್ಟಿ" ಸಿನೆಮಾಗಳು ಬಿಡುಗಡೆಯ ತವಕದಲ್ಲಿವೆ. ಇವಿಷ್ಟೇ ಅಲ್ಲ; ಚಿತ್ರೀಕರಣ ಮುಗಿಸಿರುವ ರಾಹುಕಾಲ ಗುಳಿಗಕಾಲ, ಪ್ರವೇಶ ಬಿಡುಗಡೆಯ ನಿರೀಕ್ಷೆಯಲ್ಲಿದೆ. ಉಳಿದಂತೆ ಗಬ್ಬರ್ ಸಿಂಗ್, ಭೋಜರಾಜ್ ಎಂಬಿಬಿಎಸ್, ಮಾಜಿ ಮುಖ್ಯಮಂತ್ರಿ, ನಂಬುಗೆದ ಕೊರಗಜ್ಜ ಸೇರಿದಂತೆ ಹಲವು ಹೊಸ ಹೊಸ ಹೆಸರು ಕೇಳಿಬರುತ್ತಿವೆ.