ಬೆಂಗಳೂರು, ಡಿ 30 (Daijiworld News/ MB) : ನಟಿ ಸಂಜನಾ ಮತ್ತು ನಿರ್ಮಾಪಕಿ ವಂದನಾ ಇಬ್ಬರ ನಡುವೆ ನಡೆದ ಜಗಳ ಪೊಲೀಸ್ ದೂರಿನವರೆಗೂ ತಲುಪಿದ್ದು ಈಗ ಸದ್ಯಕ್ಕೆ ಇಬ್ಬರು ತಾತ್ಕಾಲಿಕವಾಗಿ ಯಾವುದೇ ಸುದ್ದಿಯಲಿಲ್ಲ.
ಪಬ್ ಒಂದರಲ್ಲಿ ಸ್ಯಾಂಡಲ್ವುಡ್ ನಟಿ ಸಂಜನಾ ನಿರ್ಮಾಪಕಿ ವಂದನಾ ಮೇಲೆ ವಿಸ್ಕಿ ಗ್ಲಾಸ್ ಅನ್ನು ಬಿಸಾಡಿದ್ದರು. ಈ ಕುರಿತು ನಿರ್ಮಾಪಕಿ ವಂದನಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸುದ್ದಿ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದಂತೆ ಸಂಜನಾ ಕೂಡಾ ವಂದನಾ ಮೇಲೆ ದೂರು ನೀಡಿದ್ದರು.
ಜಿದ್ದಿಗೆ ನಿಂತಿದ್ದ ಇಬ್ಬರು ಈಗ ಜಗಳದಿಂದ ಹಿಂದೆ ಸರಿದಂತೆ ಕಾಣುತ್ತಿದ್ದು ಸಂಜನಾ ದೂರು ನೀಡಿದ ಕೆಲವೇ ಗಂಟೆಗಳಲ್ಲಿ ನಾನು ಈ ಪ್ರಕರಣಕ್ಕೆ ಕೊನೆ ಹಾಡುತ್ತೇನೆ ಎಂದು ಬರೆದಿದ್ದರು. ಆದರೆ ಬಳಿಕ ವಂದನಾ ನಾನು ಸುದ್ದಿಗೋಷ್ಠಿ ನಡೆಸುತ್ತೇನೆ ಕೋರ್ಟ್ ಮೆಟ್ಟಿಳೇರುತ್ತೇನೆ ಎಂದು ಹೇಳಿದ್ದು ಈಗ ಇಬ್ಬರು ಸುದ್ದಿಯಲಿಲ್ಲ.