ಮಂಗಳೂರು, ಡಿ 29 (Daijiworld News/MB) : ಶ್ರೀಶಾ ಎಳ್ಳಾರೆಯ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬರಲಿರುವ ಶಕಲಕ ಬೂಂ ಬೂಂ ಎನ್ನುವ ಕಾಮಿಡಿ ಹಾರರ್ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ.
ತುಳುವಿನಲ್ಲಿ ಮೂಡಿಬರಲಿರುವ ಈ ಸಿನೆಮಾ ಕನ್ನಡದಲ್ಲೂ ಡಬ್ ಆಗಲಿದೆ. ಹಾಗೆಯೇ ಸಿನೆಮಾದ ಶೂಟಿಂಗ್ ಉಡುಪಿ, ಮಂಗಳೂರು, ಚಿಕ್ಕಮಗಳೂರು, ಶಿವಮೊಗ್ಗ, ಮಡಿಕೇರಿ ಭಾಗಗಳಲ್ಲಿ ನಡೆಸಲು ಚಿತ್ರ ತಂಡ ತೀರ್ಮಾನ ಮಾಡಿದೆ.
ನಿತ್ಯಾನಂದ ನಾಯಕ್ ಮತ್ತು ಉಮೇಶ್ ಪ್ರಭು ಚಿತ್ರ ನಿರ್ಮಾಣ ಜವಾಬ್ದಾರಿ ಹೊತ್ತಿದ್ದು, ಈ ಸಿನೆಮಾಕ್ಕೆ ಚಿತ್ರಕಥೆ ಎಸ್.ಪಿ.ಎಲ್ ಬರೆದಿದ್ದು, ಅರ್ಜುನ್ ಲೂಯಿಸ್ ಅವರ ಸಂಭಾಷಣೆ ಇದೆ. ಛಾಯಾಗ್ರಹಣ ಹಾಗೂ ಸಂಕಲನ ಪ್ರಜ್ವಲ್ ಸುವರ್ಣ ಮತ್ತು ಅರುಣ್ ರೈ ಪುತ್ತೂರು .
ಚಿತ್ರದಲ್ಲಿ ಎಸ್.ಪಿ.ಎಲ್, ಗೋಡ್ವಿನ್ ಸ್ಪಾರ್ಕ್ಲ್, ಲಕ್ಷಾ ಶೆಟ್ಟಿ ,ಅರವಿಂದ ಬೋಳಾರ್, ಉಮೇಶ್ ಮಿಜಾರ್, ರವಿ ರಾಮಕುಂಜ, ರೂಪಾಶ್ರೀ ವರ್ಕಾಡಿ, ವಸಂತ್ ಮುನಿಯಾಲ್ ಮುಂತಾದ ಕಲಾವಿದರಿದ್ದಾರೆ.