ಬೆಂಗಳೂರು, ಡಿ 27 (Daijiworld News/MB) : ಇಂದಷ್ಟೆ ಬಿಡುಗಡೆಯಾದ ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಸಿನೆಮಾ ಈಗಾಗಲೇ ಲೀಕ್ ಆಗಿದೆ.
ಸಿನೆಮಾ ಪೈರಸ್ ಮಾಡುವುದರಲ್ಲೇ ಕುಖ್ಯಾತಿ ಪಡೆದಿರುವ ತಮಿಳುರಾಕರ್ಸ್ ಈ ಸಿನೆಮಾವನ್ನು ತಮ್ಮ ವೆಬ್ಸೈಟ್ನಲ್ಲಿ ಲೀಕ್ ಮಾಡಿದೆ.
ಸಿನೆಮಾ ಇಂದು ಬಿಡುಗಡೆ ಕಂಡಿದ್ದು ಉತ್ತಮ ಪ್ರದರ್ಶನ ಕಾಣುತ್ತಿದ್ದು ತಮಿಳುರಾಕರ್ಸ್ ಪೈರಸಿ ಮಾಡಿರುವುದರಿಂದ ಕಲೆಕ್ಷನ್ ಮೇಲೆ ಪೆಟ್ಟು ಬೀಳಲಿದೆ ಎಂಬ ಭೀತಿ ಮೂಡಿದೆ.
ಈ ಸಿನೆಮಾ ಇಂದು ಕನ್ನಡ ಭಾಷೆಗಳಲ್ಲಿ ತೆರೆ ಕಂಡಿದ್ದು 2020 ರ ಜ.1ರಂದು ತೆಲುಗು, 2020 ಜ.3ರಂದು ತಮಿಳು ಹಾಗೂ ಮಲಯಾಳಂ, 2020 ಜ.17ರಂದು ಹಿಂದಿ ಭಾಷೆಯಲ್ಲಿ ತೆರೆ ಕಾಣಲಿದೆ.