ಪಂಜಾಬ್, ಡಿ 26 (Daijiworld News/MSP): ಟಿವಿ ಕಾರ್ಯಕ್ರಮವೊಂದರಲ್ಲಿ ಕ್ರಿಶ್ಚಿಯನ್ ಸಮುದಾಯದ ನೋವುಂಟು ಮಾಡುವಂತೆ ಹೇಳಿಕೆ ನೀಡಿದ ವಿರುದ್ದ ನಟಿ ರವೀನಾ ಟಂಡನ್, ನಿರ್ದೇಶಕ ಫರಾಹ್ ಖಾನ್ , ನಿರೂಪಕಿ , ಹಾಸ್ಯನಟಿ ಭಾರ್ತಿ ಸಿಂಗ್ ವಿರುದ್ಧ ಪಂಜಾಬ್ ಅಮೃತಸರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
"ಟೆಲಿವಿಷನ್ ಕಾರ್ಯಕ್ರಮವೊಂದರಲ್ಲಿ ನಟಿ ರವೀನಾ ಟಂಡನ್, ಹಾಸ್ಯನಟಿ ಭಾರ್ತಿ ಸಿಂಗ್ ಮತ್ತು ನಿರ್ದೇಶಕ-ನಿರ್ಮಾಪಕ ಫರಾಹ್ ಖಾನ್ ವಿರುದ್ಧ ಕ್ರಿಶ್ಚಿಯನ್ ಸಮುದಾಯದ ಭಾವನೆಗಳನ್ನು ನೋಯಿಸಿದ್ದಾರೆ ಎಂದು ನಾವು ದೂರು ಸ್ವೀಕರಿಸಿದ್ದೇವೆ . ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಸೊಹನ್ ಸಿಂಗ್ ಹೇಳಿದ್ದಾರೆ.
ಭಾರತೀಯ ದಂಡ ಸಂಹಿತೆ 295-ಎ ಐಪಿಸಿ ಅಡಿಯಲ್ಲಿ ಇಂದು ಅಜ್ನಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅವರು ಹೇಳಿದ್ದಾರೆ.