ಮಂಗಳೂರು, ಡಿ 25(Daijiworld News/MB) : ರಾಜೇಶ್ ಬ್ರಹ್ಮಾವರ ನಿರ್ಮಾಣ ಮಾಡಿರುವ ತುಳು ಸಿನೆಮಾ "ಮಾಜಿ ಮುಖ್ಯಮಂತ್ರಿ" ಚಿತ್ರೀಕರಣದ ಸಹಿತ ಸಿನೆಮಾದ ನಿರ್ಮಾಣ ಕೆಲಸ ಶೇ. 75ರಷ್ಟು ಪೂರ್ಣವಾಗಿದೆ. ಈಗ ಎಡಿಟಿಂಗ್ ಹಾಗೂ ಡಬ್ಬಿಂಗ್ ಮಾಡಲಾಗುತ್ತಿದೆ.
ಈ ಸಿನೆಮಾವನ್ನು ತ್ರಿಶೂಲ್ ಶೆಟ್ಟಿ ನಿರ್ದೇಶನ ಮಾಡಿದ್ದು, ಸಿನೆಮಾದ ನಿರ್ಮಾಣ ಮಾಡಿದ ರಾಜೇಶ್ ಅವರೇ ಚಿತ್ರಕಥೆ ಬರೆದಿದ್ದಾರೆ.
ಈ ಸಿನೆಮಾದಲ್ಲಿ ಬಹುತೇಕ ಹೊಸ ಕಲಾವಿದರು ಪಾತ್ರಕ್ಕೆ ಜೀವ ತುಂಬಿದ್ದು, ಚಿತ್ರೀಕರಣ ಮಂಗಳೂರು ಹಾಗೂ ಉಡುಪಿಯಲ್ಲಿ ಮಾಡಲಾಗಿದೆ.