ಬೆಂಗಳೂರು, ಡಿ 19 (Daijiworld News/MB) : ಎನ್ ಬಿ ಗ್ರೂಪ್, ಹಸಿವು ಮುಕ್ತ ಕರ್ನಾಟಕದ ಸಹಯೋಗದೊಂದಿಗೆ ಆಯೋಜಿಸಿದ್ದ "ಮಿಸ್ ಕರ್ನಾಟಕ ಸುಪ್ರೀಂ 2019" ಕಿರೀಟವನ್ನು ಶ್ವೇತಾ ಸಂತೋಷ್ ತನ್ನ ಮುಡಿಗೇರಿಸಿಕೊಂಡಿದ್ದಾರೆ.
ಈ ಪ್ರಶಸ್ತಿಗಾಗಿ ಬೆಂಗಳೂರಿನ ಹಲವು ಭಾಗಗಳಲ್ಲಿ ಆಡಿಷನ್ ನಡೆಸಲಾಗಿದ್ದು ಆ ಪೈಕಿ ೫೫ ಮಂದಿ ಫೈನಲ್ಗೆ ಆಯ್ಕೆಯಾಗಿದ್ದರು. ನಂತರ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಎಎಂಸಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಗ್ರಾಂಡ್ ಫಿನಲೆಯಲ್ಲಿ ಶ್ವೇತಾ ಸಂತೋಷ್ ಗೆಲುವು ಸಾಧಿಸಿದ್ದಾರೆ.
ರಾಜ್ಯದಲ್ಲಿ ಸರಕಾರಿ ಶಾಲೆಗಳನ್ನು ಉಳಿಸುವ ಹಾಗೂ ರೂಪದರ್ಶಿಗಳು, ನಟರು ಹಾಗೂ ಯುವ ಪ್ರತಿಭೆಯ ಅನಾವರಣ ಮಾಡುವ ನಿಟ್ಟಿನಲ್ಲಿ ಈ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದೆ .
ಈ ಸ್ಪರ್ಧೆಯ ತೀರ್ಪುಗಾರರಾಗಿ 6 ಜನರು ಇದ್ದರು. ಅಂತಿಮ ಘಟ್ಟದ ಸ್ಫರ್ಧೆಯಲ್ಲಿ ಭಾರತೀಯ ಹಾಗೂ ಪಾಶ್ಚತ್ಯ 2 ಶೈಲಿಯಲ್ಲಿ ಸ್ಪಧಾರ್ಥಿಗಳಿಗೆ ಸ್ಫರ್ಧೆ ನಡೆಸಲಾಯಿತು. ಈ ಕಾರ್ಯಕ್ರಮವನ್ನು ಮಾರುತಿ ಮೆಡಿಕಲ್ಸ್ ಹಾಗೂ ವಿಠಲ್ ಗಾರ್ಮೇಟ್ಸ್ ಸಹಯೋಗದೊಂದಿಗೆ ಚೆಲ್ಫ್ ಟಾಕ್ ಪ್ರಾಯೋಗತ್ವದಲ್ಲಿ ನಡೆಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಐಎಫ್ಬಿಬಿ ಮಮತಾ ಗೌಡ, ಗೋವಿಂದ ಬಾಬು ಪೂಜಾರಿ, ನಟಿ ಸುಪ್ರಿಯಾ, ಸಿನಿಮಾ ನಿರ್ದೇಶಕ ಸುನಿಲ್ ಕಂಬರ್ ಮೊದಲಾದವರು ಉಪಸ್ಥತರಿದ್ದರು.