ನವದೆಹಲಿ, ಡಿ 18(Daijiworld News/MB) : ಸಾಮಾಜಿಕ ಕಾರ್ಯದಲ್ಲಿ ತೊಡಗಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ಸುಮಾರು 40 ಸಾವಿರ ಹುಡುಗಿಯರಿಗೆ ಆತ್ಮರಕ್ಷಣೆ ತರಬೇತಿಯನ್ನು ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅಕ್ಷಯ್, "ಮುಂಬೈನಲ್ಲಿ ನನ್ನ ಹಲವು ಶಾಲೆಗಳಿದ್ದು ಆ ಶಾಲೆಗಳಲ್ಲಿ ನಾನು ಮಕ್ಕಳಿಗೆ ಮಾರ್ಷಲ್ ಆರ್ಟ್ನ ತರಬೇತಿ ನೀಡುತ್ತೇನೆ. ನಾನು ಹಾಗೂ ನನ್ನ ಶಾಲೆ ವತಿಯಿಂದ ಇದುವರೆಗೂ 40 ಸಾವಿರ ಹುಡುಗಿಯರಿಗೆ ಉಚಿತವಾಗಿ ಸ್ವಯಂ ರಕ್ಷಣಾ ತರಬೇತಿ ನೀಡಲಾಗಿದೆ. ಸ್ವಯಂ ರಕ್ಷಣಾ ತರಬೇತಿ ಪಡೆಯಲು ಕಂಪನಿಯ ಸಿಇಒಗಳು, ಗೃಹಿಣಿಯರು ಮುಂತಾದವರು ಆಗಮಿಸುತ್ತಾರೆ" ಎಂದು ಹೇಳಿದ್ದಾರೆ.
ಹಾಗೆಯೇ "ನನ್ನ ಯಶಸ್ಸಿನ ಹಿಂದೆ ಶೇ. 70 ಅದೃಷ್ಟ ಹಾಗೂ ಶೇ. 30ರಷ್ಟು ಕಠಿಣ ಪರಿಶ್ರಮ ಇದೆ. ನನ್ನ ಯಶಸ್ವಿಯಾದ ಹಾಗೂ ವಿಫಲವಾದ ಎಲ್ಲಾ ಸಿನಿಮಾಗಳಿಗೂ ನಾನು ಸಮನಾಗಿ ಪರಿಶ್ರಮ ನೀಡಿದ್ದೇನೆ" ಎಂದು ತಿಳಿಸಿದ್ದಾರೆ.