ಮಂಗಳೂರು, ಡಿ 16 (Daijiworld News/MB) : ಎಸ್ಪಿಎಸ್ ಕ್ರಿಯೇಶನ್ಸ್ನ ಮೂಡಿ ಬರಲಿರುವ, ಕಾದಂಬರಿಕಾರ ಡಿ.ಸಿ.ಪಾಣಿ ನಿರ್ಮಾಣ ಮಾಡಿರುವ ತುಳು ಸಿನಿಮಾ "ಕಮ್ಮೆನ" ಸೆಟ್ಟೇರಿದೆ.
ರಂಗಭೂಮಿಯಲ್ಲಿ ಅನುಭವವಿರುವ ಶೈಲೇಶ್ ಕದ್ರಿ ಪ್ರಥಮ ಬಾರಿಗೆ ನಿರ್ದೇಶಕರಾಗಿ ಈ ಸಿನಿಮಾದ ಮೂಲಕ ಕೋಸ್ಟಲ್ವುಡ್ ಪ್ರವೇಶ ಮಾಡಿದ್ದು ಸಿನಿಮಾದಲ್ಲಿ ನಾಯಕನ ಪಾತ್ರದಲ್ಲಿ ಕಾಣಲಿದ್ದಾರೆ.
ಈಗಾಗಲೇ ದಾರಾವಾಹಿಗಳಲ್ಲಿ ನಟಿಸಿರುವ ಚಂದ್ರಶೇಖರ್ ಇನ್ನೋರ್ವ ನಾಯಯನಾಗಿ ಹಾಗೂ ಇಳಾ ವಿಟ್ಲ ನಾಯಕಿಯಾಗಿ ನಟಿಸಿದ್ದಾರೆ. ಇನ್ನೋರ್ವ ನಾಯಕಿಯಾಗಿ ಜಯಶ್ರೀಯವರು ಪ್ರಥಮ ಬಾರಿಗೆ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ.
ಈ ಸಿನಿಮಾದಲ್ಲಿ ವಿನೋದ್ ಕುಮಾರ್, ಅರುಣ್ ಪೂಜಾರಿ, ಪ್ರಶಾಂತ್ ಕೆಸಿ, ಮಾನಸ, ಶಿರೀಷ್ ತೆರೆಮೆಲೆ, ಶ್ರೀಕಾಂತ್ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಗಜಾನನ ಸ್ಟುಡಿಯೋದ ಎ ರಾಮಕೃಷ್ಣ ಛಾಯಾಗ್ರಹಣ ಮಾಡಿದ್ದು, ಶ್ರೀನಾಥ್ ಬಾಬು ಸಹಾಯಕರಾಗಿದ್ದಾರೆ. ರಜನಿಕಾಂತ್ ಸಹನಿರ್ದೇಶಕರಾಗಿ, ಬಿಎಸ್ ಧನಂಜಯ್ ಅವರು ತಾಂತ್ರಿಕ ವರ್ಗದಲ್ಲಿ ಧನಂಜಯ್ ಅವರು ಕಾರ್ಯ ನಿರ್ವಹಿಸಿದ್ದಾರೆ.