ಉಡುಪಿ, ಡಿ 14 (Daijiworld News/MB) : ಕಿಶೋರ್ ಮೂಡುಬಿದಿರೆ ನಿರ್ದೇಶನದ, ರತ್ನಾಕರ ಕಾಮತ್ ನಿರ್ಮಾಣದ ಮಾಲ್ಗುಡಿ ಡೇಸ್ ಸಿನಿಮಾ ಜನವರಿ ಕನೆಯ ವಾರದಲ್ಲಿ ತೆರೆಕಾಣಲಿರುವುದು ಬಹುತೇಕ ಪಕ್ಕ ಆಗಿದೆ ಎಂದು ಚಿತ್ರ ತಂಡ ತಿಳಿಸಿದೆ.
ನಟ ಜಗ್ಗೇಶ್ ಇತ್ತೀಚೆಗೆ ಈ ಚಿತ್ರದ ಮೊದಲ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದು ಅದು ಸ್ಯಾಂಡಲ್ವುಡ್ನಲ್ಲಿ ಸುದ್ದಿ ಮಾಡಿತ್ತು. ಅಲ್ಲದೇ ಈ ಸಿನಿಮಾದಲ್ಲಿ ನಟ ವಿಜಯ ರಾಘವೇಂದ್ರ ವಯಸ್ಸಾದ ವ್ಯಕ್ತಿಯ ಪಾತ್ರದಲ್ಲಿ ಕಂಡುಬಂದಿದ್ದು ಈ ಚಿತ್ರದ ಮೇಲೆ ಕುತೂಹಲ ಹೆಚ್ಚಾಗಿದೆ.
"ಈ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು ಈಗ ಸರ್ಟಿಫಿಕೇಶನ್ಗಾಗಿ ಕಾಯುತ್ತಿದ್ದು ಈ ತಿಂಗಳ ಅಂತ್ಯದಲ್ಲಿ ಸಟೀಫಿಕೇಟ್ ಸಿಗುವ ಸಾಧ್ಯತೆ ಇದೆ. ಈ ಚಿತ್ರ ನನ್ನ ವೃತ್ತಿ ಜೀವನದಲ್ಲಿ ಬಹು ಮುಖ್ಯ ಸಿನಿಮಾ ಆಗಲಿದೆ" ಎಂದು ನಟ ವಿಜಯ ರಾಘವೇಂದ್ರ ಹೇಳಿದ್ದಾರೆ.
ಈ ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಕಿಶೋರ್ ಮೂಡಬಿದ್ರೆ ಅವರೇ ಬರೆದಿದ್ದಾರೆ. ಗಗನ್ ಖಡೇರಿಯಾ ಅವರ ನಿರ್ದೇನದಲ್ಲಿ ಸಿನಿಮಾದ ಹಾಡುಗಳು ಮೂಡಿಬಂದಿದೆ.
ಉದಯ್ ಲೀಲಾ ಅವರ ಛಾಯಾಗ್ರಹಣ ಮಾಡಿದ್ದು ಸಾತ್ವಿಕ್ ಹೆಬ್ಬಾರ್, ಸಂದೀಪ್ ಬೆದ್ರ, ಕರುಣಾಕರ್ ಉಡುಪಿ, ಶಾಶಾಂಕ್ ನಾರಾಯಣ ನಿರ್ದೇಶನ ತಂಡದಲ್ಲಿದ್ದಾರೆ.
ಈ ಸಿನಿಮಾದಲ್ಲಿ ತೇಜಸ್ವಿನಿ ಹಾಗೂ ಅರ್ಜುನ್ ಕಾಪಿಕಾಡ್ ನಟಿಸಿದ್ದಾರೆ.