ಮುಂಬೈ, ಡಿ 13(Daijiworld News/MSP): ಬಾಲಿವುಡ್ ನ ಮೋಸ್ಟ್ ಹ್ಯಾಪಿ ಫ್ಯಾಮಿಲಿ ಪೈಕಿ ನಟ ಅಕ್ಷಯ್ ಕುಮಾರ್- ಟ್ವಿಂಕಲ್ ಖನ್ನಾ ಕುಟುಂಬವೂ ಒಂದು. ಗುಡ್ ನ್ಯೂಜ್ ಚಿತ್ರದ ಪ್ರಚಾರದಲ್ಲಿರುವ ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ತಮ್ಮ ಪತ್ನಿ ಟ್ವಿಂಕಲ್ ಖನ್ನಾ ಗೆ ವಿಶೇಷ ಉಡುಗೊರೆಯನ್ನು ನೀಡಿದ್ದಾರೆ.
ಈ ಉಡುಗೊರೆ ಇದೀಗ ಸಾಕಷ್ಟು ಸುದ್ದಿಯಾಗುತ್ತಿದೆ. ತಮ್ಮ ಪತಿ ನೀಡಿದ ಅಪರೂಪದ ಉಡುಗೊರೆ "ಈರುಳ್ಳಿ ಕಿವಿಯೋಲೆ" ಚಿತ್ರವನ್ನು ನಟಿ, ಬರಹಗಾರ್ತಿ ಟ್ವಿಂಕಲ್ ಖನ್ನಾ ಇನ್ಸ್ಟ್ರಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು ನಿಮ್ಮ ಈ ಉಡುಗೊರೆ ನನಗೆ ಸಂತಸ ತಂದಿದೆ ಎಂದಿದ್ದಾರೆ. "ನನ್ನ ಪತಿ ದಿ ಕಪಿಲ್ ಶರ್ಮಾ ಶೋನಿಂದ ಹಿಂತಿರುಗಿದಾಗ ಈ ಉಡುಗೊರೆ ತಂದಿದ್ದರು. ಈ ಉಡುಗೊರೆಯನ್ನು ಅದೇ ಶೋಗೆ ಬಂದಿದ್ದಾ ಕರೀನಾ ಕಪೂರ್ ತೋರಿಸಿದೆ ಆದರೆ ಅವರು ಹೆಚ್ಚು ಪ್ರಭಾವಿತರಾದಂತೆ ನನಗೆ ಕಾಣಲಿಲ್ಲ. ನಿನಗೆ ಇಷ್ಟವಾಗುತ್ತೆ ಎಂದು ಭಾವಿಸಿ ತಂದಿದ್ದೇನೆ ಎಂದು ಪತಿ ಅಕ್ಷಯ್ ಹೇಳಿದ್ದರಂತೆ. ಕೆಲವೊಮ್ಮೆ ಇದು ಚಿಕ್ಕ ವಿಷಯಗಳು, ನಮ್ಮ ಹೃದಯವನ್ನು ಸ್ಪರ್ಶಿಸಬಲ್ಲ ತಮಾಷೆಯ ವಿಷಯಗಳಾಗುತ್ತದೆ" ಎಂದು ಟ್ವಿಂಕಲ್ ಬರೆದಿದ್ದಾರೆ.
ಅಕ್ಷಯ್ ಮತ್ತು ಕರೀನಾ ಕಪೂರ್ ತಮ್ಮ ಮುಂಬರುವ ಚಿತ್ರ ಗುಡ್ ನ್ಯೂಜ್ ಪ್ರಚಾರಕ್ಕಾಗಿ ದಿ ಕಪಿಲ್ ಶರ್ಮಾ ಶೋಗೆ ಭೇಟಿ ನೀಡಿದ್ದರು. ಈ ಪ್ರದರ್ಶನದ ಸಮಯದಲ್ಲಿ ಕರೀನಾ ಅವರಿಗೆ ಈರುಳ್ಳಿ ಕಿವೊಯೋಲೆ ತೋರಿಸಲಾಯಿತು. ಕರೀನಾ ಅದನ್ನು ನಗುತ್ತಲೇ ನಿರಾಕರಿಸಿದ್ದರು. ಆಗ ನಟ ಅಕ್ಷಯ್ ತನ್ನ ಹೆಂಡತಿ, ಟ್ವಿಂಕಲ್ ಇದನ್ನು ಮೆಚ್ಚಬಹುದು ಎಂದು ಮನೆಗೆ ತಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈಗ ಈರುಳ್ಳಿ ಕಿವಿಯೋಲೆ ವಿಚಾರ ವೈರಲ್ ಆಗುತ್ತಿದೆ. ಈರುಳ್ಳಿ ಬೆಲೆ ಗಗನಕ್ಕೇರಿದ್ದು, ಜನಸಾಮಾನ್ಯರಿಂದ ಹಿಡಿದು ಸಂಸತ್ ವರೆಗೆ ಈರುಳ್ಳಿ ಬೆಲೆ ಏರಿಕೆ ವಿಚಾರ ಚರ್ಚೆಯಾಗುತ್ತಿದೆ.