ಮುಂಬೈ, ಡಿ 11 (Daijiworld News/MB) : ನಟಿ ದೀಪಿಕಾ ಪಡುಕೋಣೆ ವೇದಿಕೆಯಲ್ಲೇ ಕಣ್ಣೀರು ಹಾಕಿದ ಘಟನೆ ನಡೆದಿದೆ.
ದೀಪಿಕಾ ಪಡುಕೋಣೆಯವರ ಹೊಸ ಸಿನಿಮಾ "ಚಾಪಕ್"ನ ಟ್ರೇಲರ್ ಬಿಡುಗಡೆಯಾಗಿದ್ದು ಆ ಬಿಡುಗಡೆ ಕಾರ್ಯಕ್ರಮದಲ್ಲಿ ದೀಪಿಕಾ ಕಣ್ಣೀರು ಹಾಕಿದ್ದಾರೆ.
ಈ ಸಿನಿಮಾ ಆಸಿಡ್ ದಾಳಿಗೆ ಒಳಗಾದ ಲಕ್ಷ್ಮಿ ಅಗರ್ವಾಲ್ ಎಂಬ ಯುವತಿಯ ಕುರಿತಾಗಿದ್ದು ಲಕ್ಷ್ಮೀ ಅನುಭವಿಸಿದ ಕಷ್ಟಗಳ ಕುರಿತು ನೆನೆದು ದೀಪಿಕಾ ಭಾವುಕರಾದರು.
ಸಿನಿಮಾವು 2020 ರ ಜನವರಿ 10 ರಂದು ತೆರೆ ಕಾಣಲಿದೆ. ಈ ಸಿನಿಮಾದ ನಿರ್ದೇಶನವನ್ನು ಮೇಘನಾ ಗುಲ್ಜಾರ್ ಅವರು ಮಾಡಿದ್ದು, ಲೀನಾ ಯಾದವ್ ನಿರ್ಮಾಣ ಮಾಡಿದ್ದಾರೆ. ಶಂಕರ್, ಎಹಸಾನ್ ಹಾಗೂ ಲಾಯ್ ಅವರ ಸಂಗೀತ ನಿರ್ದೇಶನದಲ್ಲಿ ಹಾಡುಗಳು ಮೂಡಿಬಂದಿವೆ.
ವಿಕ್ರಾಂತ್ ಮಸ್ಸೆ ಅಮೊಲ್ ದೀಕ್ಷಿತ್ ಪಾತ್ರದಲ್ಲಿ ಅಭಿನಯಿಸಿದ್ದು ಆಸಿಡ್ ದಾಳಿಗೆ ಒಳಗಾದ ಯುವತಿಯ ಹೆಸರನ್ನು ಮಾಲತಿ ಎಂದು ಬದಲಿಸಲಾಗಿದೆ.