ಮಂಗಳೂರು, ಡಿ 08 (Daijiworld News/MB) : ಎ.ವಿ. ಜಯರಾಜ್ ನಿರ್ದೇಶನದ ‘ಕುದ್ಕನ ಮದ್ಮೆ’ ಸಿನಿಮಾದ ಶೂಟಿಂಗ್ ಹಾಗೂ ಡಬ್ಬಿಂಗ್ ಪೂರ್ಣಗೊಂಡಿದ್ದು ಇನ್ನೂ ತೆರೆ ಕಾಣಲು ಕಾಯುತ್ತಿದೆ.
ಪಿಲಿಬೈಲ್ ಯಮುನಕ್ಕೆ ಖ್ಯಾತಿಯ ಪೃಥ್ವಿ ಅಂಬರ್ ಈ ಸಿನಿಮಾದಲ್ಲಿ ನಾಯಕನಾಗಿ ಕಾಣಲಿದ್ದಾರೆ. ಹಾಗೆಯೇ ದೇವಿಪ್ರಕಾಶ್ ಹಾಗೂ ಶೀತಲ್ ನಾಯಕ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರಖ್ಯಾತ ನಟರಾದ ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ದೀಪಕ್ ರೈ ಪಾಣಾಜೆ, ಭೋಜರಾಜ್ ವಾಮಂಜೂರು, ಜೀವನ್ ಉಳ್ಳಾಲ್, ಕಾರ್ತಿಕ್ ರಾವ್, ಸಹಿತ ಹಲವಾರು ನಟರು ಪತ್ರಕ್ಕೆ ಜೀವ ತುಂಬಿದ್ದಾರೆ.
ಸಿನಿಮಾದ ಚಿತ್ರೀಕರಣವನ್ನು ಮಹಾಬಲೇಶ್ವರ ಹೊಳ್ಳ ಅವರು ಮಾಡಿದ್ದು, ಸಂಗೀತ ನಿರ್ದೇಶನವನ್ನು ರಾಹುಲ್ ಮಾಡಿದ್ದಾರೆ.