ಬೆಂಗಳೂರು, ಡಿ 05 (Daijiworld News/MB): ಸ್ಯಾಂಡಲ್ವುಡ್ ನಟಿ ಹರ್ಷಿಕಾ ಪೂಣಚ್ಚ ಮತದಾನ ಮಾಡಲು ಬಂದು ಕಣ್ಣೀರಿಟ್ಟಿದ್ದಾರೆ.
ಮತ ಚಲಾಯಿಸಿದ ನಂತರ ಮಾಧ್ಯಮದೊಂದಿಗೆ ಮಾತಾನಾಡಿದ ಅವರು, ಎಲ್ಲಾ ಚುನಾವಣೆಗಳಿಗೂ ನಾನು ನನ್ನ ತಂದೆ ಜೊತೆ ಬಂದು ಮತದಾನ ಮಾಡುತ್ತಿದೆ. ಆದರೆ 2 ತಿಂಗಳ ಹಿಂದೆಯಷ್ಟೇ ನನ್ನ ತಂದೆ ತೀರಿಕೊಂಡಿದ್ದಾರೆ. ಹಾಗಾಗಿ ಈ ಭಾರಿ ನನಗೆ ಮತಚಲಾಯಿಸುವ ಮನಸ್ಸಿಲ್ಲ. ಆದರೆ ಪ್ರಜೆಯಾದ ನಾವು ನಮ್ಮ ಹಕ್ಕನ್ನು ಚಲಾಯಿಸಲೇಬೇಕು ಎಂದು ಹೇಳಿದರು.
ಹಾಗೆಯೇ ಸಾಕಷ್ಟು ದೇಶದಲ್ಲಿ ಹೆಣ್ಣು ಮಕ್ಕಳಿಗೆ ಹೊರಗೆ ಬರುವ ಸ್ವತಂತ್ರವೂ ಇಲ್ಲ. ಹಾಗಿರುವಾಗ ನಮಗೆ ದೊರೆತಿರುವ ಈ ಹಕ್ಕನ್ನು ನಾವು ನಿರ್ಲಕ್ಷ್ಯ ಮಾಡ ಬಾರದು, ಬಂದು ಮತ ಚಲಾಯಿಸಿ ನಾಯಕರನ್ನು ಗೆಲ್ಲಿಸಿ. ಅನಾವಶ್ಯಕ ಕಾರಣ ಕೊಟ್ಟು ಮನೆಯಲ್ಲಯೇ ಇರಬೇಡಿ ಎಂದು ಮನವಿ ಮಾಡಿದರು.
ನನ್ನ ತಂದೆಯನ್ನು ನೆನೆದು ಇಂದು ಬೆಳಿಗ್ಗೆ ನನ್ನ ಮನಸ್ಸು ಭಾರವಾಗಗಿತ್ತು. ಚುನಾವಣೆಯ ಸಂದರ್ಭದಲ್ಲಿ ನನಗೆ ನನ್ನ ತಂದೆಯ ನೆನಪುಗಳು ಕಾಡುತ್ತದೆ. ಹಾಗಾಗಿ ನಾನು ಮತಚಲಾವಣೆ ಮಾಡಲು ಇಂದು ತಡವಾಗಿ ಬಂದಿದ್ದೇನೆ. ಚುನಾವಣೆಯ ದಿನದಂದು ನನ್ನ ತಂದೆ ಇಂದು ನಾವು ಮತ ಚಲಾಯಿಸಬೇಕು ಎಂದು ಬೆಳಿಗ್ಗೆ ಎದ್ದ ಕೂಡಲೇ ಎಲ್ಲರನ್ನು ಎದ್ದೇಳಲು ಹೇಳುತ್ತಿದ್ದರು. ಅಷ್ಟು ಮಾತ್ರವಲ್ಲದೇ ಎಲ್ಲರಿಗಿಂತ ಮೊದಲು ಅವರು ತಯಾರಾಗಿರುತ್ತಿದ್ದರು. ಆದರೆ ಇಂದು ನಮ್ಮನ್ನು ಎಬ್ಬಿಸಲು ತಂದೆಯೇ ಇಲ್ಲ ಎಂದು ಹೇಳಿ ಭಾವುಕಾರಾಗಿ ಕಣ್ಣೀರಿಟ್ಟರು.
ನಿನ್ನೆಯಷ್ಟೇ ಹರ್ಷಿಕಾ ಅವರ ತಂದೆಯ ಹುಟ್ಟು ಹಬ್ಬವಾಗಿದ್ದು ಹರ್ಷಿಕಾ ತನ್ನ ಇನ್ಸ್ಟಾಗ್ರಾಂನಲ್ಲಿ ತಂದೆಯೊಂದಿಗಿನ ಫೋಟೋ ಹಾಕಿದ್ದು ಶುಭಕೋರಿ ನೀವು ನನ್ನ ಪ್ರತಿ ಉಸಿರಾಟದಲ್ಲೂ ಇದ್ದೀರಿ. ನಿಮ್ಮನ್ನು ಮಿಸ್ ಮಾಡುತ್ತಿದ್ದೇನೆ. ದೇವರು ನಿಮ್ಮನ್ನು ಸಂತೋಷವಾಗಿ ಇರಿಸಿದ್ದಾರೆ ಎಂದು ನಂಬುತ್ತೇನೆ ಎಂದು ಬರೆದಿದ್ದರು.