ಮಂಗಳೂರು, ಡಿ 1 (Daijiworld News/MB) : ಇತ್ತೀಚೆಗೆ ಹಸೆಮನೆ ಏರಿದ ಪೃಥ್ವಿ ಅಂಬರ್ ನಾಯಕನಾಗಿ ನಟಿಸಿರುವ ತುಳು ಸಿನೆಮಾ 'ಆಟಿಡೊಂಜಿ ದಿನ' ಡಿಸೆಂಬರ್ 6 ಕ್ಕೆ ತೆರೆ ಕಾಣಲಿದೆ.
ಸಿನೆಮಾದ ನಿರ್ದೇಶಕರಾಗಿದ್ದ ಹ್ಯಾರಿಸ್ ಕೊನಾಜೆಕಲ್ಲು ಅಪಘಾತದಲ್ಲಿ ಮೃತ ಪಟ್ಟ ನಂತರ ವೈಭವ್ ಪ್ರಶಾಂತ್ ಈ ಸಿನೆಮಾ ನಿರ್ದೇಶಿಸಿದ್ದು ಆಕಾಶ್ ಹಾಸನ್ ಸಹ ನಿರ್ದೇಶಕರಾಗಿದ್ದಾರೆ.
ಪಟ್ಲಾ ಸತೀಶ್ ಶೆಟ್ಟಿ ಧ್ವನಿಯಲ್ಲಿ "ಆಟಿಡೊಂಜಿ ದಿನ" ಟೈಟಲ್ ಹಾಡು ಮೂಡಿಬಂದಿದ್ದು ಒಟ್ಟು ಸಿನಿಮಾದಲ್ಲಿ 4 ಹಾಡುಗಳಿವೆ. ರಾಜೇಶ್ ಭಟ್ ಮೂಡಬಿದ್ರೆ ಮತ್ತು ಎಸ್.ಪಿ. ಚಂದ್ರಕಾಂತ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ಈ ಸಿನಿಮಾದಲ್ಲಿ ನಿರೀಕ್ಷ ಶೆಟ್ಟಿ ನಾಯಕಿಯಾಗಿ ನಟಿಸಿದ್ದು ಬೆಂಗಳೂರು ಮೂಲದ ಉದ್ಯಮಿ ರಾಧಾಕೃಷ್ಣ ನಾಗರಾಜ್ ನಿರ್ಮಿಸಿದ್ದಾರೆ. ಹಾಗೆಯೇ ಸಿನೆಮಾದ ಛಾಯಾಗ್ರಹಣ ನರೇನ್ ಜಿ ಮಾಡಿದ್ದಾರೆ.
ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರ್, ದೀಪಕ್ ರೈ ಪನಾಜೆ, ಸತೀಶ್ ಬಂದಲೆ, ಸೂರಜ್ ಸಾಲ್ಯಾನ್, ವಾಸು ಮಲ್ಪೆ ಮೊದಲಾದವರು ಈ ಸಿನೆಮಾದಲ್ಲಿ ಪಾತ್ರಕ್ಕೆ ಜೀವ ತುಂಬಿದ್ದಾರೆ.