ಮುಂಬೈ, ನ 30 (Daijiworld News/MB) : ರಾನು ಮಂಡಲ್ ಅವರಿಗೆ ವೇದಿಕೆಯಲ್ಲಿ ಹಾಡಲು ಹೇಳಿದಾಗ ಹಾಡು ಮರೆತ ರಾನು ಇಂಗ್ಲೀಷ್ ಮಾತಾನಾಡಿ ಈಗ ಮತ್ತೊಮ್ಮೆ ಟ್ರೋಲ್ ಆಗಿದ್ದಾರೆ.
ಖ್ಯಾತ ಪತ್ರಕರ್ತೆ ಬರ್ಖಾ ದತ್ ಅವರ ಕಾರ್ಯಕ್ರಮದಲ್ಲಿ ರಾನು ಕಾಣಿಸಿಕೊಂಡಿದ್ದು ಸಂದರ್ಶನ ನಡೆದ ಬಳಿಕ ರಾನು ಅವರನ್ನು ಹಾಡಲು ಕೇಳಿಕೊಂಡಾಗ ರಾನು ಅವರ ಚೊಚ್ಚಲ ಹಾಡಾದ ತೇರಿ ಮೇರಿ ಕುರಿತು ’ ನಾನು ಹಿಮೇಶ್ ರೇಶ್ಮಿಯಾ ಅವರೊಂದಿಗೆ ಹಾಡಿದ ಹಾಡನ್ನು ಹಾಡಲೇ’ ಎಂದು ಕೇಳಿದ್ದಾರೆ. ಆ ಸಂದರ್ಭದಲ್ಲಿ ನಿರೂಪಕಿ ಅದೇ ಆಗಬಹುದು ಎಂದು ಹೇಳಿದ್ದು ಆದರೆ ರಾನು ಆಗಲೇ ಹಾಡನ್ನು ಮರೆತಿದ್ದರು. ಸ್ವಲ್ಪ ಹೊತ್ತು ಮೌನವಾದ ರಾನು ’ಓ ದೇವರೇ ನಾನು ಹಾಡನ್ನು ಮರೆತ’ ಎಂದು ಇಂಗ್ಲೀಷ್ನಲ್ಲಿ ಹೇಳಲು ಹೋಗಿ ’ಓ ಮೈ ಗಾಡ್ ಐ ಫಾಕ್ ಇಟ್ ಇಟ್’ ಎಂದು ಹೇಳಿ ತಾನು ಇಂಗ್ಲೀಷ್ ಮಾತಾನಾಡುವಾಗ ಆದ ತಪ್ಪಿನಿಂದಲ್ಲೇ ಟ್ರೋಲ್ ಆಗಿದ್ದಾರೆ.
ಇತ್ತೀಚೆಗೆ ರಾನು ಅವರ ಮೇಕಪ್ ಫೋಟೋ ವೈರಲ್ ಆಗಿದ್ದು ವೈರಲ್ ಆಗಿ ಹಲವು ದಿನ ಕಳೆದ ನಂತರ ಅದು ನನ್ನ ನಿಜವಾದ ಫೋಟೋವಲ್ಲ ಎಡಿಟ್ ಮಾಡಲಾಗಿದೆ ಎಂದು ರಾನು ಹೇಳಿದ್ದರು. ತನ್ನ ತಾಯಿಯನ್ನು ಟ್ರೋಲ್ ಮಾಡುತ್ತಿರುವವರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿರುವ ರಾನು ಪುತ್ರಿ ಎಲಿಜಬೆಥ್ “ಈ ರೀತಿ ನನ್ನ ತಾಯಿಯನ್ನು ಟ್ರೋಲ್ ಮಾಡಿರುವುದು ನೋಡಿ ನನಗೆ ತುಂಬಾ ದುಃಖವಾಗಿದೆ. ನನ್ನ ತಾಯಿಗೆ ಆ್ಯಟಿಟ್ಯೂಡ್ ಸಮಸ್ಯೆ ಮೊದಲಿನಿಂದಲೂ ಇದ್ದು ಜೀವನದಲ್ಲಿ ತುಂಬಾ ಕಷ್ಟಪಟ್ಟ ವ್ಯಕ್ತಿ ಯಶಸ್ಸು ಪಡೆದಾಗ ಜನರು ಅವರನ್ನು ಟ್ರೋಲ್ ಮಾಡುತ್ತಿರುವುದು ತುಂಬಾ ದುಃಖದ ಸಂಗತಿ” ಎಂದು ಹೇಳಿದ್ದಾರೆ.
ಟ್ರೋಲ್ ಮುಖಾಂತರವೇ ಸುದ್ದಿ ಆಗುತ್ತಿರುವ ರಾನು ತನ್ನ ಅಭಿಮಾನಿಗೆ ಡೋನ್ಟ್ ಟಚ್ ಮಿ ಎಂದು ಹೇಳಿ ಜನರ ಕೆಂಗಣ್ಣಿಗೂ ಗುರಿಯಾಗಿದ್ದರು. ಆ ನಂತರ ಸಂದರ್ಶನವೊಂದರಲ್ಲಿ ಮಾಧ್ಯಮದವರು ಪ್ರಶ್ನೆ ಕೇಳಿದಾಗ ತನ್ ಬ್ಯಾಗ್ನಲ್ಲಿ ಇದ್ದ ತಿಂಡಿ ತೆಗೆದು ತಿನ್ನುತ್ತಿದ್ದ ರಾನು ನೀವು ಹೇಳಿದನ್ನು ನಾನು ಕೇಳಿಸಲಿಲ್ಲ ಎಂದು ಹೇಳಿ ಟ್ರೋಲ್ ಆದರು. ಆನಂತರ ರಾನು ಅವರ ಮೇಕಪ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದು ಇದೀಗ ಇಂಗ್ಲೀಷ್ ಮಾತಾನಾಡಿದ ವಿಡಿಯೋ ಟ್ರೋಲ್ ಆಗುತ್ತಿದೆ.