ಮಂಗಳೂರು, ನ 28(Daijiworld News/MB) : ಮುಸ್ಲಿಂ ಸಮುದಾಯದಲ್ಲಿ ನೀಡುವ ತಲಾಖ್ ಕುರಿತಂತೆ "ಟ್ರಿಪಲ್ ತಲಾಖ್" ಎಂಬ ಸಿನಿಮಾ ತೆರೆಕಾಣಲು ತಯಾರಾಗಿದ್ದು ಇದರ ಮೊದಲ ಪ್ರದರ್ಶನ ಲಂಡನ್ ನಲ್ಲಿ ನಡೆಯಲಿದೆ.
ಇಂಗ್ಲೆಂಡಿನ ನೈರುತ್ಯ ಕರಾವಳಿಯ ಊರಾದ ಬ್ರಿಸ್ಟಲ್ ನ ಸ್ಕಾಟ್ ಸಿನೆಮಾ ಮಂದಿರದಲ್ಲಿ ಡಿಸೆಂಬರ್ 8ರ ಭಾನುವಾರದಂದು ಬೆಳಿಗ್ಗೆ 10 ಗಂಟೆಗೆ ಈ ಚಿತ್ರದ ಪ್ರದರ್ಶನವಾಗಲಿದೆ. ಸಿನೆಮಾ ಪ್ರದರ್ಶನದ ನಂತರ ಬ್ರಿಸ್ಟಲ್ ಹಾಗೂ ನೆರೆಯ ಊರುಗಳಿಂದ ಸಿನಿಮಾ ನೋಡಲು ಬಂದ ಪ್ರೇಕ್ಷಕರ ಜೊತೆ ಯಾಕೂಬ್ ಖಾದರ್ ಅವರು ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಬ್ರಿಸ್ಟಲ್ ನ ಕನ್ನಡ ಸ್ನೇಹಿತರು ಈ ಪ್ರದರ್ಶನವನ್ನು ಆಯೋಜನೆ ಮಾಡಿದ್ದಾರೆ.
"ಟ್ರಿಪಲ್ ತಲಾಖ್"ನಿಂದಾಗಿ ಸಂಕಷ್ಟ ಅನುಭವಿಸಿದ ಶಬೀನಾ ಎಂಬ ಮಹಿಳೆ, ಅಂಚೆ, ವಾಟ್ಸಪ್, ಪೋನ್, ಈ ಮೈಲ್ ಈ ತರದ ಒಂದೇ ಬಾರಿ ಮೂರು ಸಾರಿ ಹೇಳುವ "ಟ್ರಿಪಲ್ ತಲಾಖ್" ಗೆ "ಪವಿತ್ರ ಕುರಾನ್" ನಲ್ಲಿ ಅರ್ಥವಿಲ್ಲವೆಂದು ಕಾನೂನಿನ ಮೂಲಕ ಹೋರಾಟ ಮಾಡುವ ಸಂಘರ್ಷಮಯ ಕಥಾನಕವೆ ಈ ಸಿನೆಮಾದ ವಸ್ತು.
ಕನ್ನಡದ ಪ್ರಾದೇಶಿಕ ಭಾಷೆಗಳಲ್ಲೊಂದಾದ ಬ್ಯಾರಿ ಹಾಗು ಕನ್ನಡ ಭಾಷೆಗಳಲ್ಲಿ ಇಂಗ್ಲಿಷ್ ಸಬ್ ಟೈಟಲ್ನೊಂದಿಗೆ ಚಿತ್ರಿತವಾಗಿರುವ ಸಾಂಸಾರಿಕ ಸಿನೆಮಾ ಇದಾಗಿದ್ದು ನಾಡೋಜ ಡಾ.ಸಾ.ರಾ.ಅಬುಬಕ್ಕರ್ ಅವರ ಕತೆಯನ್ನು ಆಧರಿಸಿದೆ. ಭಾರತದಲ್ಲಿನ ಸಮುದಾಯವೊಂದರಲ್ಲಿ ಪ್ರಸ್ತುತವಾಗಿರುವ ತ್ರಿವಳಿ ತಲಾಖ್ ಸಮಸ್ಯೆ ಹಾಗೂ ಸುಪ್ರೀಂ ಕೋರ್ಟ್ ನ ಇತ್ತೀಚಿನ ತೀರ್ಪಿನ ಸುತ್ತ ಚಿತ್ರಕತೆ ಸಿನೆಮಾದ ಹೆಣೆಯಲ್ಪಟ್ಟಿದ್ದು ಅಂಚೆ, ವಾಟ್ಸಪ್, ಪೋನ್, ಈ ಮೈಲ್ ಈ ತರದ ಒಂದೇ ಬಾರಿ ಮೂರು ಸಾರಿ ಹೇಳುವ "ಟ್ರಿಪಲ್ ತಲಾಖ್" ಗೆ "ಪವಿತ್ರ ಕುರಾನ್" ನಲ್ಲಿ ಅರ್ಥವಿಲ್ಲವೆಂದು ಕಾನೂನಿನ ಮೂಲಕ ಹೋರಾಟ ಮಾಡುವ ಸಂಘರ್ಷಮಯ ಕಥೆಯಿಂದ ಕೂಡಿದೆ.
ನಾಡೋಜ ಡಾ. ಸಾ.ರಾ ಅಬುಬಕ್ಕರ್ ಅವರು ಬರೆದಿರುವ ಕಥೆಯಾದರಿತವಾದ ಈ ಸಿನಿಮಾಕ್ಕೆ ಯಾಕೂಬ್ ಖಾದರ್ ಗುಲ್ವಾಡಿಯವರು ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನವನ್ನು ಮಾಡಿದ್ದಾರೆ. ಪಣಕನಹಳ್ಳಿ ಪ್ರಸನ್ನ ಮತ್ತು ರಿಝ್ವಾನ್ ಗುಲ್ವಾಡಿ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಈ ಸಿನಿಮಾವನ್ನು ರಿಸರ್ವೇಶನ್ ಸಿನಿಮಾ ನಿರ್ಮಿಸಿದ ಗುಲ್ವಾಡಿ ಟಾಕೀಸ್ ನಿರ್ಮಾಣ ಮಾಡಿದ್ದು, ನಾರಾಯಣ ಪ್ರಭಾ ಸುವರ್ಣ ಮುಂಬೈ ಮತ್ತು ಯಾಕೂಬ್ ಖಾದರ್ ಗುಲ್ವಾಡಿ ನಿರ್ಮಾಪಕರಾಗಿದ್ದಾರೆ. ಗಿರೀಶ್ ಬಿ.ಎಮ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಪಿ.ವಿ.ಆರ್ ಸ್ವಾಮಿ ಮತ್ತು ಸತೀಶ್ ಕುಮಾರ್ ಛಾಯಾಗ್ರಹಣ ಮಾಡಿದ್ದಾರೆ.
ಕಲಾವಿದರು- ರೂಪ ವರ್ಕಾಡಿ, ನವ್ಯ ಪೂಜಾರಿ, ಬೇಬಿ ಫಹಿಮತುಲ್ ಯುಶ್ರ, ಅಝರ್ ಶಾ, ಮಹಮ್ಮದ್ ಬಡ್ಡೂರ್, ಎಮ್. ಕೆ.ಮಠ, ಅಮೀರ್ ಹಂಝ, ರವಿಕಿರಣ್ ಮುರ್ಡೇಶ್ವರ, ಎ.ಎಸ್.ಎನ್ ಹೆಬ್ಬಾರ್, ಉಮರ್ ಯು.ಹೆಚ್, ಮಾಸ್ಟರ್ ಫಹಾದ್, ನಾರಾಯಣ ಸುವರ್ಣ, ಪ್ರಭಾ ಸುವರ್ಣ ಮೊದಲಾದವರು ಮಾತ್ರಕ್ಕೆ ಜೀವ ತುಂಬಲಿದ್ದಾರೆ.