ಮುಂಬೈ, ನ 27 (Daijiworld News/MB) : ದೇಸಿ ಗರ್ಲ್ ಎಂದೇ ಪ್ರಸಿದ್ಧವಾಗಿರುವ ಪ್ರಿಯಾಂಕ ಚೋಪ್ರಾ ವಿದೇಶಿಗನಾದ ಪತಿ ನಿಕ್ ಜೋನಸ್ ಗೆ ’ಬಾಬು’ ಎಂಬ ದೇಸಿ ಹೆಸರನ್ನೇ ಇಟ್ಟಿದ್ದಾರೆ.
ಈ ಜೋಡಿಯು 2018ರಲ್ಲಿ ವಿವಾಹವಾಗಿದ್ದು ತಮ್ಮ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಲಿದ್ದಾರೆ. ಪ್ರಿಯಾಂಕ ವಾರ್ಷಿಕೋತ್ಸವ ಮುನ್ನವೇ ಪತಿ ನಿಕ್ ಗೆ ಗಿನೋ ಹೆಸರಿನ ಜರ್ಮನ್ ಶೆಫರ್ಡ್ ನಾಯಿಯನ್ನು ಗಿಫ್ಟ್ ಮಾಡಿದ್ದಾರೆ.
ಗಿಫ್ಟ್ ನೀಡಿದ ಸಂದರ್ಭದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ನಿಕ್ ಮುಂಜಾನೆ ಎದ್ದೇಳುವಾಗಲೇ ನನಗೆ ಗಿಫ್ಟ್ ಸಿಕ್ಕಿದೆ. ಇದು ನನಗೆ ಸರ್ಪ್ರೈಸ್ ಆಗಿದೆ ಎಂದು ಬರೆದುಕೊಂಡಿದ್ದು ಇದಕ್ಕೆ ಕಮೆಂಟ್ ಮಾಡಿರುವ ಪ್ರಿಯಾಂಕ ’ವಾರ್ಷಿಕೋತ್ಸವದ ಶುಭಾಶಯಗಳು ಬಾಬು. ನಿಮ್ಮ ಮುಖ ಉಲ್ಲಾಸಮಯವಾಗಿದೆ ಎಂದು ಪ್ರೀತಿಯಿಂದ ಉತ್ತರಿಸಿದ್ದಾರೆ.