ಬೆಂಗಳೂರು, ನ 24(Daijiworld News/MB) : ಕನ್ನಡ ಸಿನೆಮಾದ ಫೈಟಿಂಗ್ ಎಂದರೆ ಥ್ರಿಲ್ಲರ್ ಮಂಜುವೇ ಎಂದು ಪ್ರಸಿದ್ದರಾಗಿರುವ ಕನ್ನಡದ ಖ್ಯಾತ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅವರಿಗೆ ಗೌರವ ಡಾಕ್ಟರೇಟ್ ಪ್ರಧಾನಿಸಿ ಪುರಸ್ಕರಿಸಲಾಗಿದೆ.
'ವರ್ಚುವಲ್ ಆಫ್ ಯೂನಿವರ್ಸಿಟಿ ಫಾರ್ ಪೀಸ್ ಆಂಡ್ ಎಜುಕೇಷನ್' ಸಂಸ್ಥೆ ಹಾಗೂ ಯುನೈಟೆಡ್ ನ್ಯಾಷನಲ್ ಆರ್ಗನೈಸೇಷನ್ ಜತೆಯಾಗಿ ಮೂವತ್ತು ವರ್ಷಗಳ ಕಾಲ ಕನ್ನಡ ಸೇರಿದಂತೆ ದಕ್ಷಿಣ ಭಾರತೀಯ ಭಾಷೆಗಳ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿರುವ ಮಂಜು ಅವರಿಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಿದ್ದಾರೆ.
ಮಂಜು ತಮ್ಮ ಫೇಸ್ ಬುಕ್ ಖಾತೆಯಲ್ಲಿ ತನಗೆ ಗೌರವ ಡಾಕ್ಟರೇಟ್ ಸಂದ ಖುಷಿಯನ್ನು ಹಂಚ್ಚಿಕೊಂಡಿದ್ದಾರೆ.