ಮಂಗಳೂರು, ನ 18 (Dijiworld News/MB): ಪೃಥ್ವಿ ಅಂಬರ್ ನಾಯಕನಾಗಿ ನಟಿಸಿರುವ ತುಳು ಸಿನೆಮಾ 'ಆಟಿಡೊಂಜಿ ದಿನ' ಡಿಸೆಂಬರ್ 6 ಕ್ಕೆ ತೆರೆ ಕಾಣಲಿದೆ.
ಸಿನೆಮಾದ ನಿರ್ದೇಶಕರಾಗಿದ್ದ ಹ್ಯಾರಿಸ್ ಕೊನಾಜೆಕಲ್ಲು ಅಪಘಾತದಲ್ಲಿ ಮೃತ ಪಟ್ಟ ನಂತರ ವೈಭವ್ ಪ್ರಶಾಂತ್ ಈ ಸಿನೆಮಾ ನಿರ್ದೇಶಿಸಿದ್ದು ಆಕಾಶ್ ಹಾಸನ್ ಸಹ ನಿರ್ದೇಶಕರಾಗಿದ್ದಾರೆ. ನಿರೀಕ್ಷ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ.
ಸಿನೆಮಾದಲ್ಲಿ 4 ಹಾಡುಗಳಿದ್ದು ರಾಜೇಶ್ ಭಟ್ ಮೂಡಬಿದ್ರೆ ಮತ್ತು ಎಸ್.ಪಿ. ಚಂದ್ರಕಾಂತ್ ಸಂಗೀತ ನಿರ್ದೇಶನ ಮಾಡಿದ್ದಾರೆ. "ಆಟಿಡೊಂಜಿ ದಿನ" ಟೈಟಲ್ ಹಾಡು ಪಟ್ಲಾ ಸತೀಶ್ ಶೆಟ್ಟಿ ಧ್ವನಿಯಲ್ಲಿ ಮೂಡಿಬಂದಿದೆ.
ಬೆಂಗಳೂರು ಮೂಲದ ಉದ್ಯಮಿ ರಾಧಾಕೃಷ್ಣ ನಾಗರಾಜ್ ನಿರ್ಮಿಸಿರುವ ಈ ಸಿನೆಮಾದ ಛಾಯಾಗ್ರಹಣ ನರೇನ್ ಜಿ ಮಾಡಿದ್ದಾರೆ.
ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರ್, ದೀಪಕ್ ರೈ ಪನಾಜೆ, ಸತೀಶ್ ಬಂದಲೆ, ಸೂರಜ್ ಸಾಲ್ಯಾನ್, ವಾಸು ಮಲ್ಪೆ ಮೊದಲಾದವರು ಈ ಸಿನೆಮಾದಲ್ಲಿ ಪಾತ್ರಕ್ಕೆ ಜೀವ ತುಂಬಿದ್ದಾರೆ.