ಮುಂಬೈ, ನ 17 (Daijiworld News/MB): ಯಾವಾಗಲೂ ಸೀರೆ ಧರಿಸಿ ಜನರ ಮುಂದೆ ಕಾಣಿಸಿದ್ದ ರಾಣು ಮಂಡಲ್ ಅವರು ಲೆಹೆಂಗಾ ಧರಿಸಿರುವ ಫೋಟೋ ಸಖತ್ ವೈರಲ್ ಆಗಿದ್ದು ನೆಟ್ಟಿಗರು ಈ ಫೋಟೋವನ್ನು ಟ್ರೋಲ್ ಮಾಡುತ್ತಿದ್ದಾರೆ.
ವೈರಲ್ ಆಗುತ್ತಿರುವ ಈ ಫೋಟೋದಲ್ಲಿ ರಾಣು ತುಂಬಾ ಬೆಳ್ಳನೆ ಕಾಣಿಸಿಕೊಂಡಿದ್ದು ಜನರು ಇದನ್ನು ಹಾಸ್ಯಾತ್ಮಕವಾಗಿ ಟ್ರೋಲ್ ಮಾಡುತ್ತಿದ್ದಾರೆ. ಹಾಗೆಯೇ ಇದು ಎಡಿಟ್ ಮಾಡಿರುವ ಫೋಟೋನ ಅಥವಾ ನಿಜವಾದ ಫೋಟೋನಾ ಎಂಬ ಪ್ರಶ್ನೆ ಕೂಡಾ ಕೇಳಿ ಬರುತ್ತಿದೆ.
ಇತ್ತೀಚೆಗೆ ತನ್ನ ಅಭಿಮಾನಿಗೆ ಡೊನ್ಟ್ ಟಚ್ ಮಿ ಎಂದು ಹೇಳಿದ ವಿಡೀಯೋ ವೈರಲ್ ಆದಾಗ ಜನರು ರಾಣುವನ್ನು ತರಾಟೆಗೆ ತೆಗೆದುಕೊಂಡಿದ್ದರು. ಆ ವಿಡಿಯೋದಲ್ಲಿ ಅಭಿಮಾನಿ ಕೈ ಹಿಡಿದು ಎಳೆಯುತ್ತಿದ್ದಂತೆ ರಾಣು ಸಿಟ್ಟಿನಿಂದ ನನ್ನ ಕೈಯನ್ನು ಏಕೆ ಹಿಡಿದು ಎಳೆದಿದ್ದೀರಿ. ಈ ರೀತಿ ಕೈ ಹಾಕುವುದು ಸರಿಯಾ? ಏನಿದೆಲ್ಲಾ? ಎಂದು ರೇಗಾಡಿದ್ದರು. ಕೆಲವರು ರಾಣುವಿಗೆ ಅಹಂಕಾರ ಬಂದಿದೆ ಎಂದು ಪೋಸ್ಟ್ ಮಾಡ ತೊಡಗಿದರು.
ಇದರ ಬೆನ್ನಲ್ಲೇ ಇನ್ನೊಂದು ವಿಡಿಯೋ ವೈರಲ್ ಆಗಿದ್ದು ಅದರಲ್ಲಿ ಮಾಧ್ಯಮದವರು ಪ್ರಶ್ನೆ ಕೇಳಿದಾಗ ಬ್ಯಾಗ್ ನಿಂದ ಏನೋ ತೆಗೆದು ತಿಂದ ರಾಣು ನೀವು ಕೇಳಿದ ಪ್ರಶ್ನೆ ನನಗೆ ಕೇಳಿಸಲಿಲ್ಲ ಎಂದು ಹೇಳಿದ್ದರು. ಈ ವಿಡಿಯೋ ನೋಡಿದ ಜನರು ರಾಣುವನ್ನು ಪುನಹ ತರಾಟೆಗೆ ತೆಗೆದು ಕೊಂಡಿದ್ದರು. ಈಗ ಈ ಫೋಟೋ ವೈರಲ್ ಆಗಿದ್ದು ರಾಣು ಮತ್ತೊಮ್ಮೆ ಜನರ ಮಾತಿನ ವಸ್ತುವಾಗಿದ್ದಾರೆ.
ಮೊದಲು ಪಶ್ಚಿಮ ಬಂಗಾಳದ ರಣಘಾಟ್ ನಿಲ್ದಾಣದಲ್ಲಿ ರಾಣು 1972ರಲ್ಲಿ ಬಿಡುಗಡೆಯಾದ ’ಶೋರ್’ ಚಿತ್ರದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಹಾಡಿದ “ಏಕ್ ಪ್ಯಾರ್ ಕಾ ನಗ್ಮಾ ಹೇ” ಚಿತ್ರದ ಹಾಡನ್ನು ಹಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋವನ್ನು ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವೈರಲ್ ಆದ ಬೆನ್ನಲೇ ರಾಣು ಅವರಿಗೆ ರಿಯಾಲಿಟಿ ಶೋ ಒಂದರಲ್ಲಿ ಹಾಡುವ ಅವಕಾಶ ಸಿಕ್ಕಿತ್ತು. ಬಳಿಕ ಗಾಯಕ ಹಿಮೇಶ್ ಅವರು ತಮ್ಮ ಚಿತ್ರದಲ್ಲಿ ಹಾಡಲು ಅವಕಾಶ ಕಲ್ಪಿಸಿದ್ದರು.