ಬೆಂಗಳೂರು, ನ 16 (Daijiworld News/MSP): ಕನ್ನಡದಲ್ಲಿ ಬಹಳಷ್ಟು ಬ್ಯುಸಿ ಇರುವ ನಟಿ ರಚಿತಾ ರಾಮ್ ಅವರು ಇದೀಗ ತೆಲುಗು ಚಿತ್ರರಂಗಕ್ಕೆ ಹೆಜ್ಜೆ ಇಟ್ಟಿದ್ದಾರೆ ಎನ್ನುವ ಗಾಸಿಪ್ ಒಂದು ಬಲವಾಗಿ ಕೇಳಿಬರುತ್ತಿದೆ. 'ಮೆಗಾ ಸ್ಟಾರ್' ಚಿರಂಜೀವಿ ಅವರ 2ನೇ ಪುತ್ರಿ ಶ್ರೀಜಾ ಅವರ ಪತಿ ಆಗಿರುವ ಕಲ್ಯಾಣ್ ದೇವ್ ನಾಯಕ ನಟನಾಗಿ ಅಭಿನಯಿಸಿರುವ ಚಿತ್ರಕ್ಕೆ ಡಿಂಪಲ್ ಕ್ವೀನ್ ನಾಯಕಿಯಂತೆ.!
ಕಲ್ಯಾಣ್ ದೇವ್ ಅವರಿಗೆ ಇದು ಎರಡನೇ ಚಿತ್ರವಾಗಿದ್ದು 'ಸೂಪರ್ ಮಚ್ಚಿ' ಎಂದು ಶೀರ್ಷಿಕೆ ಫೈನಲ್ ಮಾಡಲಾಗಿದೆ. ಪುಲಿ ವಾಸು ಇದಕ್ಕೆ ನಿರ್ದೇಶನ ಮಾಡುತ್ತಿದ್ದು, ಎಸ್ಎಸ್ ಥಮನ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.
'ಸೂಪರ್ ಮಚ್ಚಿ' ಚಿತ್ರದಲ್ಲಿ ರಚಿತಾ ಅವರು ನಾಯಕಿಯಾಗಿ ನಟಿಸುವುದು ಬಹುತೇಕ ಖಚಿತವಾಗಿದೆ. ಎಲ್ಲ ಅಂದುಕೊಂಡಂತೆ ಆದ್ರೆ ನವೆಂಬರ್ 22ರಿಂದ ಈ ಸಿನಿಮಾದ ಶೂಟಿಂಗ್ ಪಕ್ಕಾ ಅಂತೆ.. ಒಂದು ವೇಳೆ, ಸೂಪರ್ ಮಚ್ಚಿ' ಸಿನಿಮಾದಲ್ಲಿ ನಟಿಸುವುದು ಖಚಿತವಾದರೆ, ಡಿಂಪಲ್ ಕ್ವೀನ್ ಅವರ ಮೊದಲ ಪರಭಾಷಾ ಚಿತ್ರವಾಗಲಿದೆ.