ಮುಂಬೈ, ನ 11 (Daijiworld News/MB): ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಅನಾರೋಗ್ಯದಿಂದ ಬಳಲುತಿರುವುದಾಗಿ ಹೇಳಿಕೋಮಡಿದ್ದು ಈ ವಿಚಾರವನ್ನು ಇನ್ಸ್ ಸ್ಟಾ ಗ್ರಾಮ್ ನಲ್ಲಿ ಪೋಸ್ಟ್ ಮಾಡಿ ತಿಳಿಸಿದ್ದಾರೆ.
ತನ್ನ ಖಾಯಿಲೆ ಬಗ್ಗೆ ಹೇಳಿಕೊಳ್ಳದ ದೀಪಿಕಾ , ಫೋಟೋದಲ್ಲಿ ಕೇವಲ ಥರ್ಮಾಮೀಟರ್ ಎಮೋಜಿ ಹಾಕಿದ್ದಾರೆ. ಇದನ್ನು ಕಂಡ ಅವರ ಅಭಿಮಾನಿಗಳು ದೀಪಿಕಾರವರು ಜ್ವರದಿಂದ ಬಳಲುತ್ತಿದ್ದಾರೆ. ಅವರು ಶೀಘ್ರ ಗುಣಮುಖರಾಗಲಿ ಎಂದು ಆಶಿಸಿ ಕಾಮೆಂಟ್ ಮಾಡಿದ್ದಾರೆ.
ಈ ಫೋಟೋ ಜೊತೆಗೆ 'ನೀವು ನಿಮ್ಮ ಆತ್ಮೀಯ ಗೆಳತಿಯ ಮದುವೆ ಸಮಾರಂಭದಲ್ಲಿ ಅತಿಯಾಗಿ ಎಂಜಾಯ್ ಮಾಡಿದರೆ ಈ ರೀತಿ ಆಗುತ್ತದೆ' ಎಂದು ದೀಪಿಕಾ ಬರೆದಿದ್ದಾರೆ.
ಇತ್ತೀಚೆಗೆ ಪತಿ, ನಟ ರಣ್ವೀರ್ ಸಿಂಗ್ ಹಾಗೂ ದೀಪಿಕಾ, ಆತ್ಮೀಯ ಗೆಳತಿಯ ಮದುವೆ ಸಮಾರಂಭಕ್ಕೆ ಹೋಗಿದ್ದು ಇದರ ಫೋಟೋ ಹಾಗೂ ವಿಡಿಯೋ ವೈರಲ್ ಆಗಿತ್ತು. ಇದರ ಬೆನ್ನಲೇ ದೀಪಿಕಾ ಅನಾರೋಗ್ಯದಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ.