ಮುಂಬಯಿ, ನ 9 (Daijiworld News/MSP): ಇಡೀ ದೇಶದ ಗಮನ ಸೆಳೆದಿದ್ದ, ಶತಮಾನಗಳಿಂದ ಚರ್ಚಾಸ್ಪದವಾಗಿದ್ದ ರಾಮ ಮಂದಿರ- ಬಾಬ್ರಿ ಮಸೀದಿ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದೆ. ಸುಪ್ರೀಂಕೋರ್ಟ್ ಶನಿವಾರ ಮಹತ್ವದ ತೀರ್ಪು ನೀಡಿ ಆದೇಶಿಸಿದೆ. ವಿವಾದಿತ 2.77 ಎಕರೆ ಭೂಮಿಯನ್ನು ರಾಮಲಲ್ಲಾಗೆ ವಹಿಸಿ , ರಾಮಮಂದಿರ ನಿರ್ಮಾನಕ್ಕೆ ಅಸ್ತು ಎಂದಿದೆ.
ಮಾತ್ರವಲ್ಲದೆ ಮಸೀದಿಯೊಂದರ ನಿರ್ಮಾಣಕ್ಕಾಗಿ ಮುಸ್ಲಿಮರಿಗೆ ಪ್ರತ್ಯೇಕ 5 ಎಕ್ರೆ ಜಮೀನು ನೀಡಿ, ವಿವಾದಿತ ಜಮೀನಿನಲ್ಲಿ ದೇಗುಲ ನಿರ್ಮಾಣ ಮಾಡಿ. ಮಂದಿರ ನಿರ್ಮಾಣಕ್ಕೆ 3 ತಿಂಗಳುಗಳಲ್ಲಿ ಯೋಜನೆಯೊಂದನ್ನು ರಚಿಸಿ ಎಂದು ಇದೇ ವೇಳೆ ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ದೇಶವೇ ಕಾತರದಿಂದ ನೋಡುತ್ತಿದ್ದ ಮಹಾತೀರ್ಪನ್ನು ಬಾಲಿವುಡ್ ತಾರೆಯರು, ಕ್ರಿಕೆಟ್ ಸ್ಟಾರ್ ಗಳು ಟ್ವಿಟರ್ ತಮ್ಮ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಸ್ವಾಗತಿಸಿದ್ದು ಹೀಗೆ..