ಮಂಗಳೂರು, ನ 8 (Daijiworld News/MB): ಕೋಸ್ಟಲ್ ವುಡ್ ನ ಬಹು ನಿರೀಕ್ಷಿತ ಸಿನೆಮಾ 'ಜಬರ್ ದಸ್ತ್ ಶಂಕರ' ಬಿಡುಗಡೆಗೊಂಡಿದೆ.
ಪ್ರಸ್ಸಿದ್ಧ ಸಿನೆಮಾ ನಿರ್ದೇಶಕ ದೇವದಾಸ್ ಕಾಪಿಕಾಡ್ ನಿರ್ದೇಶಿಸಿ, ಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಟಿಸಿದ ತುಳು ಸಿನೆಮಾ 'ಜಬರ್ ದಸ್ತ್ ಶಂಕರ' ಇಂದು ನಗರದ ಬಿಗ್ ಸಿನೆಮಾಸ್ ನಲ್ಲಿ ನಡೆದ ಬಿಡುಗಡೆ ಸಮಾರಂಭದಲ್ಲಿ ಮೂಡದ ಅಧ್ಯಕ್ಷ ಸುರೇಶ್ ಬಲ್ಲಾಳ್ ದೀಪ ಬೆಳಗಿಸಿ ಬಿಡುಗಡೆ ಮಾಡಿದರು.
ಸಿನೆಮಾವು ಬಿಗ್ ಸಿನೆಮಾಸ್, ಪಿ.ವಿ.ಆರ್., ಸಿನೆಪೋಲಿಸ್, ಉಡುಪಿಯ ಆಶೀರ್ವಾದ್, ಐ.ಎನ್.ಒ.ಎಕ್ಸ್., ಮಣಿಪಾಲದ ಬಿಗ್ ಸಿನೆಮಾಸ್, ಸುರತ್ಕಲ್ ನ ನಟರಾಜ್, ಪುತ್ತೂರಿನ ಅರುಣಾ. ಸುಳ್ಯದ ಸಂತೋಷ್ ಚಿತ್ರಮಂದಿರದಲ್ಲಿ ತೆರೆಕಾಣುತ್ತದೆ.
ಅಷ್ಟು ಮಾತ್ರವಲ್ಲದೇ ದುಬೈ, ಓಮನ್,ಕತಾರ್ ಹೊರದೇಶದಲ್ಲಿ ಹಾಗೂ ಬೆಂಗಳೂರು, ದೆಹಲಿ, ಮುಬೈ, ಗೋವಾ, ಮೈಸೂರು,ಹುಬ್ಬಳ್ಳಿ, ಶಿವಮೊಗ್ಗ, ತೀರ್ಥಹಳ್ಳಿ, ಮಡಿಕೇರಿಯಲ್ಲೂ ಮುಂತಾದೆಡೆ ತೆರೆಕಾಣಲಿದೆ.
ಅರ್ಜುನ್ ಕಾಪಿಕಾಡ್ ಮುಖ್ಯ ಪಾತ್ರ ನಿರ್ವಹಿಸಿರುವ ಈ ಸಿನೆಮಾದಲ್ಲಿ, ನಿಶ್ಮಿತಾ ಹಾಗೂ ನೀತು ನಾಯಕಿಯರಾಗಿ ಅಭಿನಯಿಸಿದ್ದಾರೆ. ಸತೀಶ್ ಬಂದಲೆ, ಸಾಯಿ ಕೃಷ್ಣ ಕುಡ್ಲ, ದೇವದಾಸ್ ಕಾಪಿಕಾಡ್ ಮುಂತಾದ ಹಿರಿಯ ಕಲಾವಿದರು ಅಭಿನಯಿಸಿದ್ದಾರೆ.
ಅನಿಲ್ ಕುಮಾರ್ ಹಾಗೂ ಲೋಕೇಶ್ ಕೋಟ್ಯಾನ್ ನಿರ್ಮಿಸಿದ್ದಾರೆ.
ಜಲನಿಧಿ ಪ್ರೋಡಕ್ಷನ್ ಹಾಗೂ ಬೊಳ್ಳಿ ಮೂವೀಸ್ ಅರ್ಪಿಸುವ ಈ ಸಿನೆಮಾಕ್ಕೆ ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ ಮಾಡಿದ್ದಾರೆ.
ಈ ಸಿನೆಮಾವನ್ನು ತಮಿಳು, ಹಿಂದಿ, ತೆಲುಗು ಭಾಷೆಗೆ ಡಬ್ಬಿಂಗ್ ಮಾಡುವ ಮಾತುಕತೆ ನಡೆಯುತ್ತಿದೆ.