ಮಂಗಳೂರು,ನ 03 (Daijiworld News/MB ): ಸಂತನು ಗಂಗೂಲಿ ನಿರ್ದೇಶನದ ಬ್ಯಾರಿ ಕಲಾತ್ಮಕ ಸಿನೆಮಾ ‘ಬೈಲ್ ಕೋಲು’ ಕೊಲ್ಕತ್ತಾದಲ್ಲಿ ನಡೆಯುವ ಅಂತರ್ ರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.
‘ಬೈಲ್ ಕೋಲು’ ಅಂತರ್ ರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾದ ಬ್ಯಾರಿ ಭಾಷೆಯ ಮೊದಲ ಸಿನೆಮಾವಾಗಿದ್ದು, ಸಂತನು ಗಂಗೂಲಿಯ ನಿರ್ದೇಶನದಲ್ಲಿ ಮೂಡಿಬಂದಿದೆ.
ರಾಜ್ಯ ಪ್ರಶಸ್ತಿ ವಿಜೇತ ಹಿರಿಯ ನಟ ಎಂ.ಕೆ. ಮಠ, ಚಂದ್ರಹಾಸ್ ಉಳ್ಳಾಲ, ಅಝಾದ್ ಕಂಡಿಗ, ರೂಪಶ್ರೀ ವರ್ಕಾಡಿ, ಭವ್ಯಾ ಕೆ., ಭಾಸ್ಕರ್ ಮಣಿಪಾಲ, ಸಂದೀಪ್ ಕುಮಾರ್, ಬಾಲನಟ ಮಾಸ್ಟರ್ ಧನುಶ್ ಮತ್ತು ಬಾಲನಟಿ ಎಸ್.ಎಸ್. ಮಠ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಈ ಚಿತ್ರಕ್ಕೆ ನಾಗೇಶ್ ಎನ್ ಕಥೆ ಬರೆದಿದ್ದು, ಎಂ.ಕೆ. ಮಠ ಸಂಭಾಷಣೆ ಬರೆದಿದ್ದಾರೆ. ವೆಂಕಟರಮಣ ಛಾಯಾಗ್ರಹಣ ಮಾಡಿ ನಿತಿನ್ ಸಂಕಲನ ಮಾಡಿದ್ದ ಈ ಸಿನೆಮಾ ನ.8ರಿಂದ 15ರವರೆಗೆ ನಡೆಯಲಿರುವ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ.