ಮುಬೈ, ನ 02 (Daijiworld News/MB): ಬಾಲಿವುಡ್ ನಟಿ ಶ್ರದ್ದಾ ಕಪೂರ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಮಾಡಿದ ಪೋಸ್ಟ್ ಜನರ ಮನ ಗೆದ್ದಿದೆ. ಅವರು ತಮ್ಮ ಇನ್ಸ್ಟಾದಲ್ಲಿ ಅತುಲ್ ಎಂಬ ವ್ಯಕ್ತಿಯ ಜೊತೆ ಇರುವ ಫೋಟೋ ಹಾಕಿ, 'ನನ್ನ ಜೀವನದ ಬಹು ಮುಖ್ಯ ಮತ್ತು ಅದ್ಭುತ ವ್ಯಕ್ತಿಯಾದ ನಿನಗೆ ಹುಟ್ಟು ಹಬ್ಬದ ಶುಭಾಶಯಗಳು. ನನ್ನನ್ನು ಈವರೆಗೆ ರಕ್ಷಿಸಿರುವುದಕ್ಕೆ ಧನ್ಯವಾದಗಳು ಅತುಲ್. ನನ್ನ ಜೀವನದಲ್ಲಿ ನೀನು ಇರುವುದು ನನ್ನ ಅದೃಷ್ಟ. ನಿನಗೆ ಸಂತೋಷ, ನೆಮ್ಮದಿ ಹಾಗೂ ನೀನು ಬಯಸಿದ್ದೆಲ್ಲವೂ ಸಿಗಲಿ ಎಂದು ನಾನು ಆಶಿಸುತ್ತೇನೆ’ ಎಂದು ಮರಾಠಿ ಭಾಷೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಬಾಲಿವುಡ್ ನಟಿ ಶ್ರದ್ದಾ ಕಪೂರ್ ತಮ್ಮ ಇನ್ಸ್ಟಾಗ್ರಾಂನಲ್ಲಿ ತನ್ನ ಬಾಡಿಗಾರ್ಡ್ ಗೆ ಹುಟ್ಟು ಹಬ್ಬಕ್ಕೆ ಶುಭಕೋರಿ ಇಬ್ಬರೂ ಜೊತೆಗಿರುವ ಫೋಟೋವನ್ನು ಪೋಸ್ಟ್ ಮಾಡಿ ಜನರ ಮೆಚ್ಚಿಗೆಗೆ ಪಾತ್ರರಾಗಿದ್ದಾರೆ.
ಈ ಪೋಸ್ಟ್ ನೋಡಿದ ಅವರ ಸ್ನೇಹಿತರು ಹಾಗೂ ಅಭಿಮಾನಿಗಳು ಅವರನ್ನು ಮೆಚ್ಚಿದ್ದಾರೆ. ಅವರ ಮೇಕಪ್ ಆರ್ಟಿಸ್ಟ್ ಶ್ರದ್ದಾ ನಾಯ್ಕ್ ‘ಹ್ಯಾಪಿ ಬರ್ತ್ಡೇ ಅತುಲ್. ನನ್ನ ಶ್ರದ್ದಿಗೆ ರಕ್ಷಣೆ ನೀಡುವ ನಿನಗೆ ಧನ್ಯವಾದಗಳು. ದೇವರು ನಿನಗೆ ಹರಸಲಿ ಎಂದು ಕಾಮೆಂಟ್ ಮಾಡಿದರೆ, ನಟ ವರುಣ್ ದಾವನ್ ಹಾರ್ಟ್ ಇಮೋಜಿಯನ್ನು ಕಾಮೆಂಟ್ ಮಾಡಿದ್ದಾರೆ.
ಇನ್ನು ಹಲವಾರು ಜನ ಶ್ರದ್ದಾ ತನ್ನ ಬಾಡಿಗಾರ್ಡ್ ಜೊತೆ ಇರುವ ಫೋಟೋ ಪೋಸ್ಟ್ ಮಾಡಿದಕ್ಕೆ ಸಂತೋಷ ವ್ಯಕ್ತ ಪಡಿಸಿದ್ದಾರೆ.