ಬೆಂಗಳೂರು, ಅ 30 (Daijiworld News/MSP): ಸ್ಯಾಂಡಲ್ವುಡ್ ದಂಪತಿ 'ರಾಕಿಂಗ್ ಸ್ಟಾರ್' ಯಶ್ ಹಾಗೂ ರಾಧಿಕಾ ಪಂಡಿತ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದು, ರಾಧಿಕಾ ಪಂಡಿತ್ ಬುಧವಾರ ಬೆಳಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಎರಡನೇ ಮಗುವಿನ ಆಗಮನದಿಂದ ರಾಕಿಂಗ್ ಸ್ಟಾರ್ ಫ್ಯಾಮಿಲಿಯ ಸಂತಸ ಡಬಲ್ ಆಗಿದೆ.
ಇನ್ನು ಮಗುವಿನ ವಿಚಾರದಲ್ಲಿ ಯಶ್ ಆಸೆಯೇ ಈ ಹಿಂದೆಯೇ ಈಡೇರಿತ್ತು. ಅದು ಹೇಗೆ ಅಂತೀರಾ? ಯಶ್ಗೆ ಹೆಣ್ಣು ಮಗು ಬೇಕು ಎನ್ನುವ ಇಚ್ಛೆ ಇತ್ತು. ರಾಧಿಕಾ ಗಂಡು ಮಗು ಬೇಕು ಎನ್ನುವ ಆಸೆ ಇಟ್ಟುಕೊಂಡಿದ್ದರು. ಅವರಿಗೆ 2018ರ ಡಿಸೆಂಬರ್ 2ರಂದು ಹೆಣ್ಣು ಮಗು ಜನಿಸಿತ್ತು. ಮುದ್ದಾದ ಮುಗುವಿಗೆ ಆಯ್ರಾ ಎಂದು ನಾಮಕರಣ ಮಾಡಿದ್ದರು.
ಇದೀಗ ರಾಧಿಕಾ ಆಸೆಯೂ ಈಡೇರಿದಂತಾಗಿದ್ದು, ಇಂದು ಬೆಳಗ್ಗೆ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದ ರಾಧಿಕಾ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ಮಗು ಹಾಗೂ ರಾಧಿಕಾ ಆರೋಗ್ಯರಾಗಿದ್ದಾರೆ ಅಂತಾ ಆಸ್ಪತ್ರೆ ಮೂಲಗಳು ತಿಳಿಸಿವೆ.