ಮಂಗಳೂರು, ಅ 25 (DaijiworldNews/SM): ಯುವ ಪ್ರತಿಭೆ ಗಾನಾ ಭಟ್ ಭಾರತೀಯ ಚಿತ್ರರಂಗದಲ್ಲಿ ತನ್ನ ಕನಸನ್ನು ನನಸಾಗಿಸಲು ಸಜ್ಜಾಗಿದ್ದಾರೆ. ಯುಎಸ್ಎ ಮೂಲದ ಗಾನಾ ತನ್ನ ಬಾಲ್ಯದ ದಿನಗಳನ್ನು ತಮಿಳುನಾಡಿನ ಕೊಯಮತ್ತೂರಿನಲ್ಲಿ ಕಳೆದಿದ್ದರು. ಮತ್ತು ಹದಿಹರೆಯದ ಸಮಯದಲ್ಲಿ ಮಂಗಳೂರಿಗೆ ಆಗಮಿಸಿದ್ದರು.
ಅವರು ಸಂತ ಅಲೋಶಿಯಸ್ ಕಾಲೇಜಿನಲ್ಲಿ ತಮ್ಮ ಪದವಿಪೂರ್ವ ಶಿಕ್ಷಣವನ್ನು ಪಡೆದರು. ಬಳಿಕ ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದರು. ಬಳಿಕ ಮೈಸೂರಿನ ಇನ್ಫೋಸಿಸ್ನಲ್ಲಿ ಎಂಜಿನಿಯರ್ ಆಗಿ ತನ್ನ ವೃತ್ತಿ ಜೀವನವನ್ನು ಅವರು ಪ್ರಾರಂಭಿಸಿದರು.
ಚಿತ್ರರಂಗಕ್ಕೆ ಪ್ರವೇಶಿಸುವ ಮೊದಲು, ಕೆಲವು ರಾಂಪ್-ವಾಕ್ ಪ್ರದರ್ಶನಗಳನ್ನು ಮಾಡಿದ್ದರು. ಅಂತಿಮವಾಗಿ, ಅವರು ಆಪಲ್ ಕಂಪೆನಿಯಲ್ಲಿ ಕೆಲಸದ ಹಿನ್ನೆಲೆ ಯುಎಸ್ ಗೆ ತೆರಳಿದರು. ಈ ನಡುವೆ ಅವರು ‘ದೇಸಿ ಟ್ವಿಸ್ಟ್’ ಎಂಬ ಯೂಟ್ಯೂಬ್ ಡ್ಯಾನ್ಸ್ ಚಾನೆಲ್ ಅನ್ನು ಸಹ ಪ್ರಾರಂಭಿಸಿದರು, ಇದು ಈಗ 54,000 ಕ್ಕಿಂತ ಹೆಚ್ಚು ಚಂದಾದಾರರ ಸಂಖ್ಯೆಯನ್ನು ಹೊಂದಿದೆ ಮತ್ತು 8 ಮಿಲಿಯನ್ ವೀಡಿಯೊಗೆ ಡ್ಯಾನ್ಸ್ ವ್ಯೂ ಎಣಿಕೆ ಹೊಂದಿದೆ.
ಡೈಜಿವರ್ಲ್ಡ್ ಜೊತೆ ಮಾತನಾಡಿದ ಅವರು, “ಯುಎಸ್ಎದಲ್ಲಿ ನನ್ನ ಅವಧಿಯಲ್ಲಿ, ನಾನು ಸಾಕಷ್ಟು ಅವಕಾಶಗಳನ್ನು ಪಡೆದುಕೊಂಡಿದ್ದೆ. ಹಾಗೂ ಹಲವಾರು ರಾಂಪ್ ವಾಕ್ ಶೋಗಳು, ವಿನ್ಯಾಸಕಾರರಿಗೆ ಫೋಟೋ ಶೂಟ್ ಗಳನ್ನು ಮಾಡಿದ್ದೇನೆ. ಕ್ಯಾಲಿಫೋರ್ನಿಯಾದ ಕೆಲವು ಸ್ಥಳೀಯ ಫ್ಯಾಶನ್ ನಿಯತಕಾಲಿಕೆಗಳಾದ 'ನವ್ಯ ಸಾಹಿತ್ಯ', '7 ಹ್ಯೂಸ್', 'ಶೀಬಾ' ಮತ್ತು ಫ್ಯಾಶನ್ ನಿಯತಕಾಲಿಕ 'ಐಮಿರೇಜ್' ನ ಮುಖಪುಟದಲ್ಲಿ ಪ್ರಕಟವಾಗಿದೆ."
ನಾಗರಾಜ್ ಭಟ್ ನಿರ್ದೇಶನದ ‘ಟ್ಯಾಕ್ಸಿ 24/7’ ಎಂಬ ಟೆಲಿಫಿಲ್ಮ್ ಮತ್ತು ತಮಿಳು, ತೆಲುಗು, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅನೇಕ ಕಿರುಚಿತ್ರಗಳು ಮತ್ತು ವೆಬ್ ಸರಣಿಗಳೊಂದಿಗೆ ಗಾನಾ ತನ್ನ ಪ್ರಯಾಣವನ್ನು ಪ್ರಾರಂಭಿಸಿದ್ದರು. ಅವರ ಇತ್ತೀಚಿನ ಬಿಡುಗಡೆಯು ಸೋನಿಲಿವ್ ತೆಲುಗು ವೆಬ್ ಸರಣಿಯಾಗಿದ್ದು, ಇದನ್ನು ‘ಮೈಮರಪು’ ಎಂದು ಕರೆಯಲಾಗುತ್ತದೆ. ಇದು ಶೀಘ್ರದಲ್ಲೇ ಯುಎಸ್ ನಲ್ಲಿ ಯುಪ್ ಟಿವಿಯಲ್ಲಿ ಲಭ್ಯವಾಗಲಿದೆ.
ಗಾನಾ ಅವರು ‘ಬಾಬ್ರು’ ಚಿತ್ರದ ಮೂಲಕ ಕನ್ನಡ ಚಿತ್ರ ರಂಗದಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಈ ಚಿತ್ರವನ್ನು ಯುಗಾ ಕ್ರಿಯೇಷನ್ಸ್ ಮತ್ತು ಸುಮನ್ ನಗರ್ಕರ್ ಪ್ರೊಡಕ್ಷನ್ ನಿರ್ಮಿಸಲಿದ್ದು, ಸುಜಯ್ ರಾಮಯ್ಯ ನಿರ್ದೇಶಿಸಿದ್ದಾರೆ.