ಮುಂಬೈ, ಅ.20(Daijiworld News/SS): ಆರೋಗ್ಯದಲ್ಲಿ ಕೊಂಚ ಏರುಪೇರಾದ ಕಾರಣ ಬಿಗ್-ಬಿ ಅಮಿತಾಭ್ ಬಚ್ಚನ್ ಅವರನ್ನು ಮಂಗಳವಾರ (ಅ.15) ತಡರಾತ್ರಿ ಮುಂಬೈನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಇದೀಗ ಅವರು ಚೇತರಿಸಿಕೊಂಡಿದ್ದು ಮನೆಗೆ ಮರಳಿದ್ದಾರೆ.
ಬಿಗ್-ಬಿ ತಮಗಾಗಿ ಪ್ರಾರ್ಥಿಸಿದ ಎಲ್ಲ ಅಭಿಮಾನಿಗಳು ಮತ್ತು ಸ್ನೇಹಿತರಿಗೆ ಧನ್ಯವಾದ ಅರ್ಪಿಸಿದ್ದಾರೆ. ಮಾತ್ರವಲ್ಲ, ಗಾಸಿಪ್ ಮಂದಿಯ ಕಿವಿ ಹಿಂಡಿದ ಅವರು, ‘ಯಾವುದೇ ವ್ಯಕ್ತಿಯ ಅನಾರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ವ್ಯಾಪಾರಕ್ಕೆ ಬಳಸಿಕೊಳ್ಳಬೇಡಿ. ಎಲ್ಲರ ಖಾಸಗಿತನವನ್ನು ಗೌರವಿಸಿ ಎಂದು ಚಾಟಿ ಬೀಸಿದ್ದಾರೆ.
ಪ್ರಸ್ತುತ ಅವರು ‘ಬ್ರಹಾಸ್ತ್ರ’, ‘ಗುಲಾಬೋ ಸಿತಾಬೋ’, ‘ಚೆಹ್ರೆ’ ಮುಂತಾದ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ.