ನವದೆಹಲಿ, ಅ 18 (Daijiworld News/MSP): ವಿವಾಹಿತ ಸ್ತ್ರೀಯರು ಆಚರಿಸುವ ಕರ್ವಾ ಚೌತ್ ಉತ್ತರ ಭಾರತದಲ್ಲಿ ಹೆಚ್ಚು ಜನಪ್ರಿಯ. ಪ್ರಾಚೀನ ಸಂಪ್ರದಾಯವಾದ ಪತಿಯ ಸುದೀರ್ಘ ಆಯುಸ್ಸಿಗಾಗಿ ಇದನ್ನು ಆಚರಿಸುತ್ತಾರೆ ಮತ್ತು ದಿನ ಪೂರ್ತಿ ಆಹಾರ, ನೀರು ಏನನ್ನೂ ಸೇವಿಸದೇ, ಪತಿಯ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ಎಲ್ಲಾ ಬಾಲಿವುಡ್ ಕಪಲ್ಸ್, ಕರ್ವಾ ಚೌತ್ ಆಚರಿಸಿದ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಆದರೆ ಇದರಲ್ಲಿ ಹೆಚ್ಚು ಸುದ್ದಿಯಾಗಿದ್ದು, ನಟಿ ಪ್ರಿಯಾಂಕಾ ಚೋಪ್ರಾ ಅವರ ಕರ್ವಾ ಚೌತ್ ವ್ರತ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಇದೇ ಮೊದಲ ಬಾರಿಗೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಆಚರಿಸಿದ್ದು, ಇದನ್ನು ನಿಕ್ ಜೋನಾಸ್ ತಮ್ಮ ಇನ್ಸ್'ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ನನ್ನ ಪತ್ನಿ ಪ್ರಿಯಾಂಕಾ ಭಾರತೀಯಳು, ಆಕೆ ಹಿಂದು. ಆಕೆ ನಿಜಕ್ಕೂ ಅಭೂತಪೂರ್ವ. ಭಾರತೀಯ ಸಂಸ್ಕೃತಿ ಹಾಗೂ ಹಿಂದೂ ಧರ್ಮದ ಬಗ್ಗೆ ಆಕೆ ಸಾಕಷ್ಟು ಹೇಳಿಕೊಟ್ಟಿದ್ದಾಳೆ. ನಾನು ಆಕೆಯನ್ನು ತುಂಬಾ ಪ್ರೀತಿಸುತ್ತೇನೆ, ಇಷ್ಟಪಡುತ್ತೇನೆ. ನಮ್ಮಿಬ್ಬರ ಒಡನಾಟವನ್ನು ಫೋಟೋದಲ್ಲಿಯೇ ನೋಡಬಹುದು. ಎಲ್ಲರಿಗೂ ಕರ್ವಾ ಚೌತ್ ಶುಭಾಶಯಗಳು ಎಂದು ಹೇಳಿದ್ದಾರೆ.
ಇದರಂತೆ ಪ್ರಿಯಾಂಕಾ ಕೂಡ ಇನ್ಸ್'ಸ್ಟಾಗ್ರಾಮ್ ನಲ್ಲಿ ಕರ್ವಾ ಚೌತ್ ಆಚರಣೆಯ ಫೋಟೋವನ್ನು ಹಂಚಿಕೊಂಡಿದ್ದು, ಜೋನಸ್ ಸಹೋದರನ ಸಂಗೀತ ಕಾರ್ಯಕ್ರಮದಲ್ಲಿ ಕರ್ವಾ ಚೌತ್ ಆಚರಣೆ. ವೈವಾಹಿಕ ಜೀವನದ ಬಳಿಕ ಇದು ಮೊದಲ ಹಬ್ಬ. ಸದಾ ಕಾಲ ನೆನಪಿನಲ್ಲಿರುತ್ತದೆ ಎಂದು ಹೇಳಿದ್ದಾರೆ.