ಮುಂಬೈ, ಅ 18 (Daijiworld News/MSP): ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆಯಲ್ಲಿ ಮುಂಬೈನ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಅವರನ್ನು ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವಿಶೇಷ ಕ್ಯಾಬಿನ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಅವರನ್ನು ನೋಡಲು ಆಪ್ತ ಸಂಬಂಧಿಕರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ ಎಂದು ವರದಿಯಾಗಿದೆ.
ಯಕೃತ್ತು ಸಂಬಂಧಿಸಿದ ಖಾಯಿಲೆಯಿಂದ ಅಮಿತಾಭ್ ಬಚ್ಚನ್ ಬಳಲುತ್ತಿದ್ದು, ಅ.15 ರ ಮಂಗಳವಾರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಅಮಿತಾಭ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಮಿತಾಭ್ ಅವರ ಲಿವರ್ ನ ಶೇ.75ರಷ್ಟು ಈಗಾಗಲೇ ಹಾನಿಯಾಗಿದೆ ಎಂದು ಅವರೇ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದರು. ತಾನು ಕೇವಲ 25% ಲಿವರ್ ನಲ್ಲೇ ಬದುಕುತ್ತಿದ್ದೇನೆ ಎಂದು ಹೇಳಿಕೊಂಡಿದ್ದರು. 1982ರಲ್ಲಿ ಕೂಲಿ ಸಿನಿಮಾದ ಚಿತ್ರೀಕರಣದ ವೇಳೆ ಸಂಭವಿಸಿದ ಅಪಘಾತದಲ್ಲಿ ಅಮಿತಾಭ್ ಬಚ್ಚನ್ ಅವರ ಲಿವರ್ ಶೇ. 75ರಷ್ಟು ಹಾನಿಯಾಗಿತ್ತು.