ನವದೆಹಲಿ, ಅ 15 (Daijiworld News/MSP): ಖ್ಯಾತ ಇಂಗ್ಲೀಷ್ ಗಾಯಕ ಎಲ್ಟನ್ ಜಾನ್, ಇನ್ನೇನು ಬಿಡುಗಡೆಯಾಗಲಿರುವ ತಮ್ಮ ಆತ್ಮಚರಿತ್ರೆಲ್ಲಿ ಪಾಪ್ ಲೋಕದ ದೊರೆ ದಿಂ. ಮೈಕಲ್ ಜಾಕ್ಸನ್ ಅವರನ್ನು "ಮಾನಸಿಕ ಅಸ್ವಸ್ಥ" ಎಂದು ಕರೆದಿದ್ದಾರೆ.
ಗಾಯಕ ಎಲ್ಟನ್ ಜಾನ್ ತನ್ನ "ಮಿ" ಎಂಬ ಶೀರ್ಷಿಕೆ ಆತ್ಮಚರಿತ್ರೆಯಲ್ಲಿ, ಮೈಕಲ್ ಜಾಕ್ಸನ್ ಅವರ ಮಾನಸಿಕ ಗೊಂದಲವನ್ನು ವಿವರಿಸಿದ್ದಾರೆ ಎಂದು "ಡೈಲಿಮೇಲ್.ಕೊ.ಯುಕೆ" ವರದಿ ಮಾಡಿದೆ. ಎಲ್ಟನ್ ಜಾನ್ ತಮ್ಮ ವೃತ್ತಿಜೀವನದ ಆರಂಭದಲ್ಲಿಯೇ ಮೈಕಲ್ ಜಾಕ್ಸನ್ ಅವರ ಸ್ನೇಹವನ್ನು ಸಂಪಾದಿಸಿದ್ದರು. ಅವರು ವಿವರಿಸಿದಂತೆ, " ಮೈಕೆಲ್ ಜಾಕ್ಸನ್ 13 ಅಥವಾ 14 ವರ್ಷ ವಯಸ್ಸಿದ್ದಾಗಲೇ ನಾನು ಬಲ್ಲೆ, ಆದರೆ ಕಾಲ ಕಳೆದಂತೆ ಮೈಕಲ್ ತನ್ನನ್ನು ತಾನು ಪ್ರಪಂಚದಿಂದ ದೂರವಿರಿಸಲು" ಪ್ರಯತ್ನಿಸಿದ್ದ . ಮೈಕಲ್ ಜಾಕ್ಸನ್ ಒಂದಷ್ಟು ವರ್ಷಗಳ ಕಾಲ, ಖ್ಯಾತ ಗಾಯಕ ಹಾಗೂ ನಟ ಎಲ್ವಿಸ್ ಪ್ರೀಸ್ಲಿ ಮಾಡಿದಂತೆ, " ತನ್ನನ್ನು ತಾನು ಪ್ರಪಂಚದಿಂದ, ಹಾಗೂ ವಾಸ್ತವದಿಂದ ದೂರವಿರಿಸಲು ಪ್ರಾರಂಭಿಸಿದ ಎಂದು ವಿವರಿದ್ದಾರೆ,
ಮೈಕಲ್ ಏನು ಯೋಚಿಸುತ್ತಿದ್ದ ಎನ್ನುವುದು ದೇವರೇ ಬಲ್ಲ, ಆತ ತೆಗೆದುಕೊಳ್ಳುತ್ತಿದ್ದ ಡ್ರಗ್ಸ್ ಕೂಡಾ ದೇವರೇ ಬಲ್ಲ, ಆತನನ್ನು ನಂತರದ ವರ್ಷಗಳಲ್ಲಿ ನಾನು ನೋಡಿದಾಗಲೆಲ್ಲಾ ಆತ ಎಲ್ಲವನ್ನೂ ಸಂಪೂರ್ಣವಾಗಿ ಕಳೆದುಕೊಂಡವನಂತೆ ಕಾಣಿಸುತ್ತಿದ್ದ. ಒಂದು ಬಾರಿ ಆತ ನನ್ನನ್ನು ಪಾರ್ಟಿಗೆ ಆಹ್ವಾನಿಸಿದ್ದ, ಆದರೆ ನಾನು ನೋಡಿದಾಗ ಮೈಕಲ್ ಮನೆಕೆಲಸಗಾರನ ಮಗುವಿನೊಂದಿಗೆ ಆಟವಾಡುತ್ತಾ ಕುಳಿತಿದ್ದ, ವಯಸ್ಕರೊಂದಿಗೆ ಬೆರೆಯಲು ಇಚ್ಚಿಸುತ್ತಿರಲಿಲ್ಲ ಎಂದು ಮುಂದುವರಿಸಿ ವಿವರಿಸಿದ್ದಾರೆ.