ಮಂಗಳೂರು, ಅ 09 (Daijiworld News/MSP): ಕೋಸ್ಟಲ್ವುಡ್ ಕಲಾವಿದರ ಮತ್ತು ತಂತ್ರಜ್ಞರ ಒಕ್ಕೂಟದ ನೂತನ ಅಧ್ಯಕ್ಷರಾಗಿ ಮೋಹನ್ ಕೊಪ್ಪಳ ಕದ್ರಿ ಅವಿರೋಧವಾಗಿ ಆಯ್ಕೆಯಾದರು. ಕದ್ರಿ ಗೋಕುಲ್ ಹಾಲ್ನಲ್ಲಿ ಪಮ್ಮಿ ಕೊಡಿಯಾಲಬೈಲ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಕಿಶೋರ್ ಡಿ.ಶೆಟ್ಟಿ (ಗೌರವಾಧ್ಯಕ್ಷ), ಪಮ್ಮಿ ಕೊಡಿಯಾಲಬೈಲ್ (ಗೌರವ ಸಲಹೆಗಾರ), ಮೋಹನದಾಸ್ ರೈ (ಕಾನೂನು ಸಲಹೆಗಾರ), ಧನರಾಜ್ ಆರ್. (ಉಪಾಧ್ಯಕ್ಷ), ಪ್ರಕಾಶ್ ಶೆಟ್ಟಿ (ಪ್ರಧಾನ ಕಾರ್ಯದರ್ಶಿ), ವಿಶ್ವಾಸ್ ಗುರುಪುರ (ಕೋಶಾಧಿಕಾರಿ), ಜೀವನ್ ಉಳ್ಳಾಲ್ (ಜತೆ ಕಾರ್ಯದರ್ಶ), ಶರತ್ ಪೂಜಾರಿ, ಧನರಾಜ್ ಕದ್ರಿ (ಕ್ರೀಡಾ ಕಾರ್ಯದರ್ಶಿಗಳು), ವಿದ್ಯಾಶ್ರೀ ಕೈಕಂಬ (ಮಹಿಳಾ ಕ್ರೀಡಾ ಕಾರ್ಯದರ್ಶಿ), ಲಕ್ಷ್ಮೀಶ್ ಸುವರ್ಣ, ಪ್ರಜ್ವಲ್ ಅತ್ತಾವರ (ಸಂಘಟನಾ ಕಾರ್ಯದರ್ಶಿಗಳು), ಅಶ್ವಿನಿ ಕೋಟ್ಯಾನ್ (ಮಹಿಳಾ ಸಂಘಟನಾ ಕಾರ್ಯದರ್ಶಿ), ಶರಣ್ ಕೈಕಂಬ, ರಾಜೇಶ್ ಅಳಪೆ, ರಾಜೇಶ್ ಕಣ್ಣೂರು (ಸಾಂಸ್ಕೃತಿಕ ಕಾರ್ಯದರ್ಶಿಗಳು) ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅರುಣ್ ಶೆಟ್ಟಿ ಕಡಂದಲೆ, ಪ್ರಶಾಂತ್ ಕಂಕನಾಡಿ, ಸುರೇಶ್ ವಿಟ್ಲ, ಸಚಿನ್ ಅಡ್ಯಾರ್, ಯಶವಂತ ಶೆಟ್ಟಿ ಕೃಷ್ಣಾಪುರ, ಜಿತೇಶ್ ಉಳಿಯ, ಗೌರವ್ ಕದ್ರಿ, ಭರತ್ ಆಳ್ವಾ, ವಿಕ್ರಮ್ ಶೆಟ್ಟಿ, ದಿನೇಶ್ ಧರ್ಮಸ್ಥಳ, ರಂಜನ್ ಬೋಳೂರು, ದಯಾನಂದ ಬುಡ್ರಿಯಾ, ವೈಷ್ಣವಿ ಕದ್ರಿ ಆಯ್ಕೆಯಾದರು.