ಮಂಗಳೂರು, ಅ.04(Daijiworld News/SS): ಇದೇ ಮೊದಲ ಬಾರಿಗೆ ದುಬೈಯ ಕಲಾತಂಡವೊಂದು ಮಂಗಳೂರಿಗೆ ಬಂದು ಅ.11ರಂದು ನಗರದ ಪುರಭವನದಲ್ಲಿ ನಾಟಕ ಪ್ರದರ್ಶನ ನೀಡಲಿದೆ. ರಂಗಭೂಮಿಯ ಕಲಾವಿದ ಕಿಶೋರ್ ಡಿ ಶೆಟ್ಟಿಯವರ ಲಕುಮಿ ನಾಟಕ ತಂಡದ ಸಹಕಾರದಲ್ಲಿ ಮಂಗಳೂರಿನ ರಂಗಚಾವಡಿ ಸಾಂಸ್ಕೃತಿಕ ಸಂಘಟನೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ದುಬೈಯ ಗಮ್ಮತ್ ಕಲಾವಿದರು ಬಯ್ಯಮಲ್ಲಿಗೆ ಎಂಬ ನಾಟಕವನ್ನು ಪ್ರದರ್ಶಿಸಲಿದ್ದಾರೆ.
ಪರದೆ ನಾಟಕಗಳು ಬಹುತೇಕ ನೇಪಥ್ಯಕ್ಕೆ ಸರಿದಿರುವ ಈ ದಿನಗಳಲ್ಲಿ ಸುಮಾರು 54 ವರ್ಷಗಳ ಹಿಂದೆ ಡಾ. ಸಂಜೀವ ದಂಡೆಕೇರಿ ಅವರು ಬರೆದಿರುವ ಬಯ್ಯಮಲ್ಲಿಗೆ ನಾಟಕವನ್ನು ದುಬೈಯ ಕಲಾವಿದರು ಮಂಗಳೂರಿನಲ್ಲಿ ಪ್ರದರ್ಶನ ಮಾಡಲಿದ್ದಾರೆ. ವಿಶ್ವನಾಥ್ ಶೆಟ್ಟಿ ನಿರ್ದೇಶನದ ಈ ಪ್ರಬುದ್ಧ ಸಾಂಸಾರಿಕ ನಾಟಕವನ್ನು ದುಬೈಯ ಗಮ್ಮತ್ ಕಲಾವಿದರು ತವರಿಗೆ ಬಂದು ಅಭಿನಯಿಸಿ ತೋರಿಸುತ್ತಿರುವುದು ವಿಶೇಷ.
ಅ.11ರಂದು ನಗರದಲ್ಲಿ ನಡೆಯಲಿರುವ ಬಯ್ಯಮಲ್ಲಿಗೆ ನಾಟಕದಲ್ಲಿ ಗಮ್ಮತ್ ಕಲಾತಂಡದ ವಾಸು ಶೆಟ್ಟಿ ಪೂಜಾರಿ, ಚಿದಾನಂದ ಪೂಜಾರಿ ವಾಮಂಜೂರು, ಡೊನಾಲ್ಡ್, ಕಿರಣ್ ಶೆಟ್ಟಿ ದುಬೈ, ರೂಪೇಶ್ ಶೆಟ್ಟಿ ಕಲ್ಲಡ್ಕ, ದೀಪಕ್ ಎಸ್.ಪಿ ಕರ್ಮಾರ್, ಜೆಸ್ ಬಾಯರ್, ರಮೇಶ್ ಸಸಿಹಿತ್ಲು, ಸಂದೀಪ್ ದೇವಾಡಿಗ, ಪ್ರಶಾಂತ್ ನಾಯರ್, ಸತೀಶ್ ಪೂಜಾರಿ, ದೀಪ್ತಿ ಧನರಾಜ್, ಶಶಿ ಶೆಟ್ಟಿ, ಸತೀಶ್ ಉಳ್ಳಾಲ್, ಅಶೋಕ್ ಬೈಲೂರು, ಸಂಗೀತ ಶುಭಕರ್, ವಿಶ್ವನಾಥ್ ಶೆಟ್ಟಿ ಪದವಿನಂಗಡಿ ಮೊದಲಾದ ಕಲಾವಿದರು ಅಭಿನಯಿಸಲಿದ್ದಾರೆ.