ಮಂಗಳೂರು, ಅ 2 (Daijiworld News/RD): ಸೂರಜ್ ಬೋಳಾರ್ ನಿರ್ದೇಶನದ ’ರಾಹುಕಾಲ ಗುಳಿಗಕಾಲ’ ಸಿನೆಮಾ ಸೆನ್ಸಾರ್ ಪಾಸಾಗಿದ್ದು, ಸೆನ್ಸಾರ್ ಮಂಡಳಿಯು ಸಿನೆಮಾ ನೋಡಿ ಎಲ್ಲಿಯೂ ಕತ್ತರಿ ಪ್ರಯೋಗಿಸದೆ, ಸಂಭಾಷಣೆಯನ್ನೂ ಮ್ಯೂಟ್ ಮಾಡದೆ ಯು/ಎ ಪ್ರಮಾಣಪತ್ರ ನೀಡಿದೆ.
ಜಲನಿಧಿ ಫಿಲಂಸ್ನ ಅನಿಲ್ ಕುಮಾರ್, ಲೋಕೇಶ್ ಕೋಟ್ಯಾನ್ ಹಾಗೂ ರಾಜೇಶ್ ಕುಡ್ಲ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ, ನಿರ್ದೇಶಕ ಸೂರಜ್ ಬೋಳಾರ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಇನ್ನು ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದು, ಚಿತ್ರದಲ್ಲಿ ಅರ್ಜುನ್ ಕಾಪಿಕಾಡ್, ನವ್ಯತಾ ರೈ, ಅರವಿಂದ ಬೋಳಾರ್, ವಿಸ್ಮಯ ವಿನಾಯಕ್, ಚಂದ್ರಹಾಸ್ ಉಳ್ಳಾಲ್, ಸಂತೋಷ್ ಶೆಟ್ಟಿ, ಉಮೇಶ್ ಮಿಜಾರ್, ವಿಸ್ಮಯ ವಿನಾಯಕ್, ಮೈಮ್ ರಾಮ್ದಾಸ್ ಸೇರಿದಂತೆ ಇನ್ನಿತರ ತಾರಾಬಳಗವನ್ನು ಒಳಗೊಂಡಿದೆ.
ಕೆಲವೊಂದು ಗಳಿಗೆಯು ವ್ಯಕ್ತಿಯ ಮೆಲೆ ಯಾವ ರೀತಿಯ ಪ್ರಭಾವ ಬೀರುತ್ತದೆ. ಹೀಗೆ ಕಾಲವಲ್ಲದ ಕಾಲದಲ್ಲಿ ಎದುರಾಗುವ ಒಂದೊಂದು ಸನ್ನಿವೇಶವನ್ನು ರಾಹುಕಾಲ-ಗುಳಿಗಕಾಲ ಚಿತ್ರದಲ್ಲಿ ಕಟ್ಟಿ ಕೊಡಲಾಗಿದೆ. ಇದೀಗ ಚಿತ್ರತಂಡ ಚಿತ್ರೀಕರಣ ಮುಗಿಸಿದ್ದು, ತೆರೆ ಕಾಣಲು ಸಕಲ ಸಿದ್ಧತೆ ನಡೆಸಿದೆ.