ಬೆಂಗಳೂರು, ಅ 1 (Daijiworld News/RD): ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಪಂಚಭಾಷೆಗಳಲ್ಲಿ ಮಿಂಚಿದ್ದ ನಟಿ ಸಮೀರಾ ರೆಡ್ಡಿ, ಇದೀಗ ತಾಯ್ತನದ ದಿನದ ಸಂಭ್ರಮದಲ್ಲಿದ್ದು, ಇದೇ ವೇಳೆ ಎಲ್ಲರನ್ನು ನಿಬ್ಬರೆಗಾಗಿಸುವಂತಹ ಸಾಧನೆಯೊಂದನ್ನು ಮಾಡಿದ್ದಾರೆ.
ಹೌದು, ತನ್ನ ಎರಡು ತಿಂಗಳ ಹಿಂದಷ್ಟೇ ಮುದ್ದಾದ ಮಗುವಿಗೆ ಜನ್ಮ ನೀಡಿರುವ ನಟಿ ಸಮೀರಾ ರೆಡ್ಡಿ, ಕರ್ನಾಟಕದ ಅತಿ ಎತ್ತರದ ಶಿಖರ ಎನಿಸಿಕೊಂಡಿರುವ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಬೆಟ್ಟ ಹತ್ತಿ ಹೊಸದಾಖಲೆ ನಿರ್ಮಿಸಿ ಇತರರಿಗೆ ಸ್ಪೂರ್ತಿಯಾಗಿದ್ದಾರೆ.
ಅಷ್ಟಕ್ಕೂ ಅವರು, ಏಕಾಂಗಿಯಾಗಿ ಈ ಶಿಖರವನ್ನು ಹತ್ತದೆ, ತನ್ನ ಎರಡು ತಿಂಗಳ ಮಗು ನೈರಾಳೊಂದಿಗೆ ಶಿಖರವನ್ನೇರಿದ್ದು ಎಲ್ಲರನ್ನು ಆಶ್ಚರ್ಯಚಕಿತಗೊಳಿಸಿದ್ದು, ಅಭಿಮನಿಗಳಿಗೆ ಥ್ರಿಲ್ ಆಗುವಂತೆ ಮಾಡಿದ್ದಾರೆ. ಈಗ ಅವರು ಶಿಖರ್ ಹತ್ತುತ್ತಿರುವ ವಿಡಿಯೋವನ್ನು ಅವರು ತಮ್ಮ ಇನ್ಸ್ಟಾ ಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ದೃಶ್ಯಕ್ಕೆ ದಂಗಾಗಿದ್ದಾರೆ.
'ನೈರಾಳೊಂದಿಗೆ ಮುಳ್ಳಯ್ಯನಗಿರಿ ಏರಲು ಪ್ರಯತ್ನಿಸಿದೆ. ಮಧ್ಯದಲ್ಲಿ ನನಗೆ ದಣಿವಾಗಿದ್ದರಿಂದಾಗಿ ಸ್ವಲ್ಪಹೊತ್ತು ನಿಂತೆ, ಕರ್ನಾಟಕದಲ್ಲಿಯೇ ಅತಿ ಎತ್ತರದ ಶಿಖರವಾಗಿರುವ ಮುಳ್ಳಯ್ಯನಗಿರಿ 6300 ಅಡಿ ಎತ್ತರವಿದೆ, ನನ್ನ ಪ್ರಯಾಣ ಅವರಿಗೆ ಸಕಾರಾತ್ಮಕ ಪ್ರಭಾವ ಬಿರಿದೆ ಎಂದು ತಿಳಿದುಕೊಳ್ಳಲು ರೋಮಾಂಚನವಾಗುತ್ತದೆ' ಎಂದು ಪೋಸ್ಟ್ ಮಾಡಿದ್ದಾರೆ. ಈಗ ಅವರ ಈ ಪೋಸ್ಟ್ ಅಭಿಮಾನಿಗಳು ಫಿದಾ ಆಗಿದ್ದು, ಒಳ್ಳೆಯ ರೆಸ್ಪನ್ಸ್ ದೊರೆತಿದೆ.
ಅತಿ ಎತ್ತರದ ಶಿಖರವಾದ ಮುಳ್ಳಯ್ಯನ ಗಿರಿ ಮೇಲೆ ಗಾಳಿಯೂ ರಭಸದಿಂದ ಬೀಸುತ್ತಿದ್ದು, ಮಗು ಅಳುತ್ತಿರುವ ದೃಶ್ಯವೂ ಕೂಡ ವಿಡಿಯೋದಲ್ಲಿ ಸೆರೆಯಾಗಿದೆ.