ಮಂಗಳೂರು, ಸೆ.26 (Daijiworld News/RD): ಕೋಸ್ಟಲ್ ವುಡ್ ನಲ್ಲಿ ರಾಮ್ ಶೆಟ್ಟಿಯವರ ಚೊಚ್ಚಲ ನಿರ್ದೇಶನದಲ್ಲಿ ’ಏರಾಗಾವುಯೇ ಕಿರಿಕಿರಿ’ ಚಿತ್ರ ಮೂಡಿ ಬರುತ್ತಿದ್ದು, ಸಿನಿ ಪ್ರಿಯರಿಗೆ ಹಾಸ್ಯದ ರಸದೌತಣ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶ ನೀಡಲು ಸಜ್ಜಾಗಿದೆ. ಇದೀಗ ಚಿತ್ರದ ಬಹುತೇಕ ಶೂಟಿಂಗ್ ಕಾರ್ಯ ಪೂರ್ಣಗೊಂಡಿದ್ದು ನವೆಂಬರ್ ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ವೇಗಸ್ ಫಿಲ್ಮಸ್ ಲಾಂಛನದಲ್ಲಿ, ರೋಶನ್ ವೇಗಸ್ ನಿರ್ಮಿಸುತ್ತಿರುವ ಈ ಚಿತ್ರವು ರಾಮ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ. ಇನ್ನು ಚಿತ್ರದ ಚಿತ್ರೀಕರಣ ಇತ್ತೀಚೆಗೆ ಪೂರ್ಣಗೊಂಡಿದೆ. ಇನ್ನು ಚಿತ್ರದ ಡಬ್ಬಿಂಗ್ ಕೆಲಸ ಬರದಿಂದ ಸಾಗುತ್ತಿದ್ದು, ದೀಪಾವಳಿ ಸಮಯಕ್ಕೆ ರಿಲೀಸ್ ಆಗುವುದು ಬಹುತೇಕ ಪಕ್ಕಾ ಆಗಿದೆ. ಬ್ರಹ್ಮಾವರದ ಪೇತ್ರಿ ಬಳಿ ಇರುವ ಗುತ್ತಿನ ಮನೆಯಲ್ಲಿ ಅಂತಿಮ ಹಂತದ ಶೂಟಿಂಗ್ ಆಗಿದ್ದು, ಮಾಸ್ ಮಾದ ನಿರ್ದೇಶನದಲ್ಲಿ ಸಾಹಸ ದೃಶ್ಯಗಳನ್ನು ಸಂಯೋಜಿಸಲಾಗಿದೆ.
ಇನ್ನು ಈ ಚಿತ್ರಕ್ಕೆ ರಾಮ್ ದಾಸ್ ಸಸಿಹಿತ್ಲು ಸಹನಿರ್ದೇಶನವಿದ್ದು, ರವಿಚಂದನ್ ಅವರ ಛಾಯಾಗ್ರಹಣವಿದೆ. ಇನ್ನು ಚಿತ್ರದ ವಿಶೇಷ ಎಂಬಂತೆ ವಿ.ಮನೋಹರ್ ಸಂಗೀತ ನೀಡಿದ್ದಾರೆ. ಚಿತ್ರಕಥೆ ಸಚಿನ್ ಶೆಟ್ಟಿ ಅವರದ್ದಾಗಿದ್ದು, ಸಂಭಾಷಣೆ, ಸಾಹಿತ್ಯವನ್ನು ಡಿಬಿಸಿ ಶೇಖರ್ ಅವರು ಬರೆದರೆ, ನಾಸಿರ್ ಹಕೀಂ ಸಂಕಲಿಸಿದ್ದಾರೆ. ಮದನ್ ಹರಿಣಿ ನೃತ್ಯ ಸಂಯೋಜಿಸಿದ್ದು, ದೇವಿ ಪ್ರಕಾಶ್ ಅವರ ಕಲಾನಿರ್ದೇಶನದಲ್ಲಿ ಮೂಡಿಬಂದಿದೆ.
ತಾರಾಗಣದಲ್ಲಿ ಕುಸೇಲ್ದರಸೆ ನವೀನ್ ಡಿ ಪಡೀಲ್, ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ಮಹಮ್ಮದ್ ನಹೀಮ್ ಉದ್ಯಾವರ, ಐಶ್ವರ್ಯಾ ಹೆಗ್ಡೆ, ರೋಶನ್ ವೇಗಸ್, ಶ್ರದ್ಧಾ ಸಾಲ್ಯನ್, ಹರೀಶ್ ವಾಸು ಶೆಟ್ಟಿ, ಸಾಯಿಕೃಷ್ಣ ಕುಡ್ಲ, ಸಂದೀಪ್ ಶೆಟ್ಟಿ ಮಾಣಿಬೆಟ್ಟು,ಉಮೇಶ್ ಮಿಜಾರ್, ಸುಂದರ ರೈ ಮಂದಾರ, ದಿನೇಶ್ ಕೋಡಪದವು, ಪ್ರದೀಪ್ ಚಂದ್ರ, ಸುನಿಲ್ ನೆಲ್ಲಿಗುಡ್ಡೆ, ರಘು ಪಾಂಡೇಶ್ವರ, ಸರೋಜಿನಿ ಶೆಟ್ಟಿ, ಶೇಖರ್ ಭಂಡಾರಿ, ಶ್ರೀಜಿತ್ ವಸಂತ ಮುನಿಯಾಲ್, ಪ್ರಿಯಾಮಣಿ, ಪವಿತ್ರಾ ಶೆಟ್ಟಿ, ಡಿಬಿಸಿ ಶೇಖರ್, ಖುಶಿ ಚಂದ್ರಶೇಖರ್ ಇನ್ನಿತರ ಕಲಾವಿದರ ಬಳಗವನ್ನು ಒಳಗೊಂಡಿದೆ.