ಮುಂಬೈ, ಸೆ 24 (Daijiworld News/RD): ಇಂಟರ್ನೆಟ್ ಸೆನ್ಸೇಶನಲ್ ಸ್ಟಾರ್ ಆಗಿದ್ದ ರಾನು ಮೊಂಡಾಲ್ ಗೆ ಖ್ಯಾತ ಬಾಲಿವುಡ್ ನಟ ಸುಲ್ತಾನ್ ಸಲ್ಮಾನ್ ಖಾನ್ ಫ್ಲಾಟ್ ನ್ನು ಗಿಫ್ಟ್ ನೀಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಆದರೆ ಈ ಸುದ್ದಿಗೆ ಸ್ವತಃ ಸಲ್ಮಾನ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ.
ಸೋಮವಾರ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸಲ್ಮಾನ್ ಖಾನ್, ನಾನು ಕೂಡಾ ಈ ಸುದ್ದಿಯನ್ನು ಕೇಳಿದ್ದೇನೆ. ಆದರೆ ಇದು ಸುಳ್ಳು. ರಾನು ಮೊಂಡಲ್ ಗೆ ನಾನು ಯಾವುದೇ ಫ್ಲಾಟ್ ನೀಡಿಲ್ಲ ಹಾಗಾಗಿ ನಾನು ಮಾಡಿರಿದೇ ಇರುವ ಕಾರ್ಯಕ್ಕೆ ಪ್ರಶಂಸೆ ಪಡೆಯಲು ಇಚ್ಛಿಸುವುದಿಲ್ಲ ಎಂದಿದ್ದಾರೆ. ರಾನು ಮೊಂಡಲ್’ಗೆ ಸುಲ್ತಾನ್ ಸಲ್ಮಾನ್ ಖಾನ್ 55 ಲಕ್ಷ ರೂಪಾಯಿ ಮೌಲ್ಯದ ಫ್ಲಾಟ್ ನೀಡಿದ್ದಾರೆ ಎಂಬ ಸುದ್ದಿಗೆ ತೆರೆ ಎಳೆದಿದ್ದಾರೆ.
ಇತ್ತೀಚಿಗೆ ಅವರು ಪಶ್ಚಿಮ ಬಂಗಾಳದ ರಣಘಾಟ್ ನಿಲ್ದಾಣದಲ್ಲಿ ಲತಾ ಮಂಗೇಶ್ಕರ್ ಅವರ ’ಏಕ್ ಪ್ಯಾರ್ ಕಾ ನಾಗಮ ಹ’ ಹಾಡನ್ನು ಹಾಡುತ್ತಿದ್ದ ರಾನು ಮೊಂಡಾಲ್, ಅವರ ಹಾಡಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೊಸ ಅಲೆಯನ್ನು ಸೃಷ್ಠಿಸಿದ್ದು, ಸಾಕಷ್ಟು ವೈರಲ್ ಆಗಿತ್ತು. ಇವರ ಪ್ರತಿಭೆಯನ್ನು ಗಮನಿಸಿದ ಗಾಯಕ ಮತ್ತು ನಟ ಹಿಮೇಶ್ ರೇಶಮ್ಮಿಯಾ ಸೂಕ್ತ ವೇದಿಕೆಯನ್ನು ಕಲ್ಪಿಸಿ ಕೊಟ್ಟಿದ್ದು, ಅವರ ಮುಂಬರುವ ಹ್ಯಾಪಿ ಹಾರ್ಡಿ ಮತ್ತು ಹೀರ್ ಚಿತ್ರದ ಆರಂಭಿಕ ಹಾಡನ್ನು ರೆಕಾರ್ಡ್ ಮಾಡಿದ್ದಾರೆ. ರಾನೂ ಮೊಂಡಲ್ ಅಂತಿಮವಾಗಿ ತನ್ನ ಮೊದಲ ಬಾಲಿವುಡ್ ಚಲನಚಿತ್ರ ಗೀತೆ ‘ತೇರಿ ಮೇರಿ ಕಹಾನಿ’ಯನ್ನು ಧ್ವನಿಸುರುಳಿ ಬಿಡುಗಡೆಯಾಗಿದ್ದು, ಇಂಟರ್ ನೆಟ್ ನಲ್ಲಿ ಹವಾ ಸೃಷ್ಟಿಸಿದೆ. ರಾನು ಮೊಂಡಾಲ್ ಅವರ ಹಾಡಿಗೆ ಸಲ್ಮಾನ್ ಖಾನ್ ಕೂಡ ಫಿದಾ ಆಗಿದ್ದು, ಅವರಿಗೆ 55 ಲಕ್ಷ ರೂ ಮೌಲ್ಯದ ಫ್ಲಾಟ್ ಅನ್ನು ಗಿಫ್ಟ್ ನೀಡಿದ್ದಾರೆ ಎಂಬ ಸುದ್ದಿ ಹರಡಿತ್ತು.