ಮಂಗಳೂರು, ಸೆ 23 (Daijiworld News/RD): ಕೋಸ್ಟಲ್ ವುಡ್ ನ ಬಹುನಿರೀಕ್ಷಿತ ತುಳು ಚಿತ್ರ "ಆಟಿಡೊಂಜಿ ದಿನ"ದ ಪೋಸ್ಟರ್ ನಗರದ ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದಲ್ಲಿ ಶನಿವಾರ ಬಿಡುಗಡೆಗೊಂಡಿದೆ.
ಚಿತ್ರವನ್ನು ಹ್ಯಾರಿಸ್ ಕೊಣಾಜೆಕಲ್ಲು ನಿರ್ದೇಶಿಸಿದ್ದು, ದುರಾದೃಷ್ಟವಶಾತ್ ಅವರು ಇತ್ತೀಚೆಗೆ ಅಪಘಾತದ ಸಂಭವಿಸಿ ಮೃತಪಟ್ಟಿದ್ದಾರೆ. ಇದೀಗ ಚಿತ್ರವು ದಗಲ್ ಬಾಜಿಲು ಚಿತ್ರದ ಖ್ಯಾತ ನಿರ್ದೇಶಕ ಎ ಎಸ್ ಪ್ರಶಾಂತ್ ವೈಭವ್ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದು, ಇನ್ನು ಆಕಾಶ್ ಹಸನ್ ಸಹ ನಿರ್ದೇಶನ ಈ ಚಿತ್ರಕ್ಕಿದೆ. ರಾಧಾಕೃಷ್ಣ ನಾಗರಾಜ್ ಮತ್ತು ಚೈತ್ರ ರಾಧಾಕೃಷ್ಣ ಅವರ ನಿರ್ಮಾಣದ ಈ ಚಿತ್ರ, ಭವಿಶ್ ಆರ್ ಕೆ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬರುತ್ತಿದೆ.
ಇನ್ನು ಚಿತ್ರದಲ್ಲಿ ಕೊಸ್ಟಲ್ ವುಡ್ ನ ಮೋಸ್ಟ ಹ್ಯಾಂಡ್ ಸಮ್ ಬಾಯ್ ಪೃಥ್ವಿ ಅಂಬರ್ ನಾಯಕನಾಗಿ ಮಿಂಚಿದ್ದು, ಇವರಿಗೆ ನಾಯಕಿಯಾಗಿ ಅಪ್ಪೆ ಟೀಚರ್ ಖ್ಯಾತಿಯ ನಿರೀಕ್ಷಾ ಶೆಟ್ಟಿ ನಟಿಸಿದ್ದಾರೆ. ಭೋಜರಾಜ್ ವಾಮಂಜೂರ್, ನವೀನ್ ಡಿ ಪಡಿಲ್, ಅರವಿಂದ್ ಬೋಳಾರ್, ಶ್ರದ್ಧಾ ಸಾಲಿಯನ್, ಇನ್ನಿತರ ಕಲಾವಿದರ ಬಳಗವನ್ನೇ ಹೊಂದಿರುವ ಚಿತ್ರತಂಡ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.