ತಮಿಳುನಾಡು,ಸೆ 16 (Daijiworld News/RD): ಕಾಲಿವುಡ್ ನಟ ಸೂರ್ಯ ಅವರು ತಮ್ಮ ಅಭಿಮಾನಿಗಳಲ್ಲಿ ರಾಜ್ಯದಲ್ಲಿ ಇನ್ನು ಮುಂದೆ ನನ್ನ ಕಟೌಟ್, ಬ್ಯಾನರ್ ಹಾಕಬೇಡಿ ಎಂದು ಕಳಕಳಿಯ ಮನವಿ ಮಾಡಿದ್ದರೆ.
ಇತ್ತೀಚೆಗೆ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದಾಗ ಅಕ್ರಮವಾಗಿ ಹಾಕಲಾಗಿದ್ದ ಎಐಎಡಿಎಂಕೆಯ ಬ್ಯಾನರ್ ತಲೆಯ ಮೇಲೆ ಬಿದ್ದ ಪರಿಣಾಮ ಶುಭಶ್ರೀ ಮೃತಪಟ್ಟಿದ್ದು, ರಾಜಕೀಯ ವ್ಯಕ್ತಿಗಳ ವಿರುದ್ಧ ಹಾಗೂ ಸಿನಿಮಾ ಕಲಾವಿದರ ವಿರುದ್ಧ ಸಾರ್ವಜನಿಕರು ಆಕ್ರೋಶವನ್ನು ಹೊರಹಾಕುತ್ತಿದ್ದರು. ಈ ಕಾರಣಕ್ಕಾಗಿ ತಮಿಳು ನಟ ಸೂರ್ಯ ಅವರು ತಮಿಳುನಾಡಿನ ಯಾವುದೇ ಭಾಗದಲ್ಲಿ ತಮ್ಮ ಬ್ಯಾನರ್ ಹಾಗೂ ಕಟೌಟ್ ಹಾಕದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇದೀಗ ತಮ್ಮ ನೆಚ್ಚಿನ ನಟನ ಮಾತು ಕೇಳಿದ ಅಭಿಮಾನಿಗಳು ಅವರ ‘ಕಾಪ್ಪನ್’ ಚಿತ್ರದ ಬಿಡುಗಡೆಯ ದಿನ ಕಟೌಟ್ ಹಾಗೂ ಬ್ಯಾನರ್ ಹಾಕುವ ಬದಲು 200 ಜನರಿಗೆ ಹೆಲ್ಮೆಟ್ ನೀಡುವುದಾಗಿ ನಿರ್ಧರಿಸಿದ್ದಾರೆ.
2017ರಲ್ಲಿ ಮದ್ರಾಸ್ ಹೈಕೋರ್ಟ್ ತಮಿಳುನಾಡಿನಾದ್ಯಂತ ಎಲ್ಲಾ ರೀತಿಯ ಬ್ಯಾನರ್ ಗಳು, ಹೋರ್ಡಿಂಗ್ಗಳು ಹಾಗೂ ಜಾಹೀರಾತುಗಳನ್ನು ನಿಷೇಧಿಸುವ ಆದೇಶವನ್ನು ನೀಡಿತ್ತು. ಆದರೆ ಇದನ್ನು ಪಾಲಿಸದೆ, ರಾಜಕೀಯ ಪಕ್ಷಗಳು ಹಾಗೂ ಅವರ ಬೆಂಬಲಿಗರು ಅಕ್ರಮ ಬ್ಯಾನರ್ ಹಾಕುವ ಮೂಲಕ ಜನರ ಜೀವಕ್ಕೆ ಅಪಾಯವನ್ನುಂಟು ಮಾಡುತ್ತಿದ್ದಾರೆ.