ಮಂಗಳೂರು, ಸೆ 14 (Daijiworld News/RD): ಕೋಸ್ಟಲ್ ವುಡ್ ನ ಖ್ಯಾತ ನಿರ್ದೇಶಕ ಎ.ವಿ.ಜಯರಾಜ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಕುದ್ಕನ ಮದ್ಮೆ', ತನ್ನ ಪಂಚಿಂಗ್ ಟೈಟಲ್ ಮೂಲಕ ಎಂಟ್ರಿಯಾಗಿದ್ದು ತೆರೆ ಕಾಣಲು ಸಜ್ಜಾಗುತ್ತಿದೆ.
ಮಳೆ ಹಾಗೂ ಬಿಸಿಲು ಒಮ್ಮೆಲೇ ಕಾಣಿಸಿಕೊಂಡಾಗ ತುಳುನಾಡಿನ ಜನರ ಬಾಯಲ್ಲಿ ಜನಜನಿತವಾಗಿರುವ ಮಾತೆಂದೆರೆ ಅದು ಕುದ್ಕನ ಮದ್ಮೆ. ಇದನ್ನೇ ಮುಖ್ಯ ಟೈಟಲ್ ಆಗಿಸಿರುವ ನಿರ್ದೇಶಕರು, ಸಿನಿಮಾ ಶೂಟಿಂಗ್ ಮುಗಿಸಿ, ಡಬ್ಬಿಂಗ್ ಕೂಡ ಪೂರ್ಣಗೊಳಿಸಿದ್ದು, ಕುದ್ಕನ ಮದ್ಮೆಗೆ ಆತ್ಮೀಯ ಕರೆಯೋಲೆಯನ್ನು ನೀಡಿದೆ.
ಇನ್ನು ಚಿತ್ರದಲ್ಲಿ ಪೃಥ್ವಿ ಅಂಬರ್ ಗೆ, ಶೀತಲ್ ನಾಯಕ್ ಜೋಡಿಯಾಗಿ ನಟಿಸಿದ್ದು, ದೇವಿಪ್ರಕಾಶ್, ನವೀನ್ ಡಿ.ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ದೀಪಕ್ ರೈ ಪಾಣಾಜೆ, ಕಾರ್ತಿಕ್ ರಾವ್, ಜೀವನ್ ಉಳ್ಳಾಲ್ ಸೇರಿದಂತೆ ಹಲವು ಸ್ಟಾರ್ ನಟರು ಸಿನೆಮಾದಲ್ಲಿದ್ದಾರೆ. ಇನ್ನು ಚಿತ್ರದಲ್ಲಿ ಮಹಾಬಲೇಶ್ವರ ಹೊಳ್ಳರ ಛಾಯಾಗ್ರಹಣ ಇದ್ದು, ಸಂಗೀತದಲ್ಲಿ ರಾಹುಲ್ ಕೈಜೋಡಿಸಿದ್ದಾರೆ. ಇದೀಗ ಚಿತ್ರವು ಟೈಟಲ್ ನಲ್ಲೇ ಭಾರೀ ಕುತೂಹಲ ಮೂಡಿಸಿದೆ.