ಮುಂಬಯಿ ,ಸೆ 05 (Daijiworld News/MSP): ಬಹುಭಾಷ ನಟಿ ಇಲಿಯಾನಾ ಡಿಕ್ರೂಸ್ ನೆಟ್ಟಿಗನೊಬ್ಬನ ಅಸಂಬದ್ಧ ಪ್ರಶ್ನೆಗೆ ಗರಂ ಆಗಿ ತಕ್ಕ ಉತ್ತರ ನೀಡಿದ್ದಾರೆ. ಇತ್ತೀಚೆಗೆ ನಟಿ ಇಲಿಯಾನಾ ಡಿಕ್ರೂಸ್ ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂನಲ್ಲಿ ಅಭಿಮಾನಿಗಳಿಗೆ ಪ್ರಶ್ನೆಗಳಿದ್ದರೆ ಕೇಳಿ ಎಂದು ಬರೆದುಕೊಂಡಿದ್ದರು. ಹಲವು ನಟಿಯ ಮುಂದಿನ ಸಿನಿಮಾ ಪ್ರಾಜೆಕ್ಟ್ , ಇಷ್ಟದ ಆಹಾರ, ಅವರ ಅಭಿರುಚಿಗಳ ಬಗ್ಗೆ ಪ್ರಶ್ನಿಸಿದ್ದರು.
ಆದರೆ ಒಬ್ಬಾತ ಮಾತ್ರ ಇಲಿಯಾನಾ ಡಿಕ್ರೂಸ್ ಅವರನ್ನು ಕನ್ಯತ್ವ ಯಾವಾಗ ಕಳೆದುಕೊಂಡಿರಿ ಎಂದು ಕೀಳಾಭಿರುಚಿಯ ಪ್ರಶ್ನೆ ಕೇಳಿದ್ದೇನೆ. ಇದಕ್ಕೆ ಇದಕ್ಕೆ ಕೆರಳಿದ ನಟಿ ಡಿಕ್ರೂಸ್, ನೀವು ಇತರರ ವಿಚಾರಕ್ಕೆ ಅತಿಯಾಗಿ ತಲೆ ಹಾಕುತ್ತೀರಾ. ಇದೇ ಪ್ರಶ್ನೆಗೆ ನಿಮ್ಮ ತಾಯಿ ಏನು ಹೇಳುತ್ತಾರೆ ? ಎಂದು ಉತ್ತರಿಸುವ ಮೂಲಕ ತಿರುಗೇಟು ನೀಡಿದ್ದಾರೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ನಟಿಯರ ತೇಜೋವಧೆ ಹೆಚ್ಚಾಗುತ್ತಿದ್ದು, ಇದಕ್ಕೆ ಇದೂ ಒಂದು ಉದಾಹರಣೆಯಾಗಿದೆ. ಇಲಿಯಾನಾ ಹಿಂದಿಯ ಪಾಗಲ್ ಪಂತಿ ಚಿತ್ರದಲ್ಲಿ ನಟಿಸಿದ್ದು ಈ ಚಿತ್ರದಲ್ಲಿ ನಟ ಜಾನ್ ಅಬ್ರಾಹಂ. ಅನಿಲ್ ಕಪೂರ್, ಅರ್ಷದ್ ವಾರ್ಸಿ ಹಾಗೂ ನಟಿ ಕೃತಿ ಕರಬಂಧ ಕೂಡಾ ನಟಿಸಿದ್ದಾರೆ. ಈ ಚಿತ್ರ ನವೆಂಬರ್ 22ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ.