ಮಂಗಳೂರು, ಸೆ 04 (Daijiworld News/MSP): ತುಳುನಾಡಿನ ಚೆಂದುಳ್ಳಿ ಚೆಲುವೆ ಅಪ್ಪೆ ಟೀಚರ್ ಮೂಲಕ ಹೆಸರುವಾಸಿಯಾದ "ಕೋಸ್ಟಲ್ ವುಡ್ ಕ್ವೀನ್ " ನಿರೀಕ್ಷಾ ಶೆಟ್ಟಿ ಸದ್ಯ ಸಖತ್ ಸೌಂಡ್ ಮಾಡ್ತಾ ಇದ್ದಾರೆ.. ಆದ್ರೆ ಅವರು ಈಗ ಸುದ್ದಿಯಾಗಿರೋದು ಸಿನಿಮಾ ಮೂಲಕ ಅಲ್ಲ..ತನ್ನ ಹಾಟ್ ಅವತಾರದ ಮೂಲಕ. ಅಪ್ಪೆ ಟೀಚರ್ ನಲ್ಲಿ ಗಯ್ಯಾಳಿ ಪಾತ್ರದಲ್ಲಿ ಡಿ ಗ್ಲಾಮರ್ ಲುಕ್ ನಲ್ಲಿ ಕಾಣಿಸಿಕೊಂಡ ನಟಿ ನಿರೀಕ್ಷಾ ಶೆಟ್ಟಿ ಮೇಕಪ್ ಆರ್ಟಿಸ್ಟ್ ಪ್ರಜ್ಞಾ ಅವರ ಮೇಕಪ್ ನೊಂದಿಗೆ ಸದ್ಯ ಬೋಲ್ಡ್ ಲುಕ್ ನಲ್ಲಿ ಅಭಿಮಾನಿಗಳ ಮುಂದೆ ಬಂದಿದ್ದಾರೆ.
ಯಸ್ ನಿರೀಕ್ಷಾ ಮಾಡಿಸಿರುವ ಫೋಟೋ ಶೂಟ್ ನಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಗ್ಲಾಮರ್ ಲುಕ್ ನಲ್ಲಿ ಹೇಮಂತ್ ಕುಮಾರ್ ಅವರ ಕ್ಯಾಮೆರಾಗೆ ಪೋಸ್ ಕೊಟ್ಟ ನಿರೀಕ್ಷಾ ಸೌಂದರ್ಯಕ್ಕೆ ನೆಟ್ಟಿಗರು ಬೆರಗಾಗಿದ್ದಾರೆ.
ನಟಿಯಾಗಿ ಮಾತ್ರವಲ್ಲದೆ ಮಾಡೆಲ್ ಕೂಡಾ ಆಗಿರುವ ನಿರೀಕ್ಷಾಗೆ ಪೊಟೋಶೂಟ್ ಅಂದ್ರೆ ಕೊಂಚ ಆಸಕ್ತಿ ಜಾಸ್ತಿಯಂತೆ.. ಈ ಹಿಂದೆಯೂ ಹಲವೂ ಫೋಟೋಶೂಟ್ ಮಾಡಿಸಿಕೊಂಡಿದ್ರು, ಬ್ಲಾಕ್ ಡ್ರೆಸ್ ಸಖತ್ ಹಾಟ್ ಆಗಿ ಕಾಣಿಸಿಕೊಂಡು ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ. ಅವರು ಇನ್ನು ಅವರ ಅಭಿಮಾನಿಗಳು ಬೋಲ್ಡ್ ಅವತಾರಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಅಪ್ಪೆ ಟೀಚರ್ ಸಿನಿಮಾ ಬಳಿಕ ಮೊದಲ ಹೆಜ್ಜೆಯಲ್ಲೇ ಯಶಸ್ಸನ್ನು ತಮ್ಮದಾಗಿಸಿಕೊಂಡ ಸಾಲು ಸಾಲು ಚಿತ್ರದಲ್ಲಿ ನಟಿಸಿದ ನಿರೀಕ್ಷಾ ಶೆಟ್ಟಿಯ ಅಭಿನಯದ ಲಾಸ್ಟ್ ಬೆಂಚ್. ರಡ್ಡ್ ಎಕ್ರೆ ಹಾಗೂ ಆಟಿಡೊಂಜಿ ದಿನ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ.