ಮಂಗಳೂರು,ಸೆ 2 (Daijiworld News/RD): ಬಿಡುಗಡೆಗೊಂಡ ಒಂದೇ ವಾರದಲ್ಲಿ ಒಂದು ಕೋಟಿ ಕಲೆಕ್ಷನ್ ಮಾಡಿದ ಕೋಸ್ಟಲ್ ವುಡ್ ನ ಮೊದಲ ತುಳು ಚಿತ್ರ ಗಿರಿಗಿಟ್ ಆಗಿದ್ದು, ಚೌತಿ ಹಬ್ಬದ ಸಂಭ್ರಮದ ದಿನವಾದ ಇಂದು ಕರಾವಳಿಯಾದ್ಯಂತ ಎಲ್ಲಾ ಥಿಯೇಟರ್ ಗಳಲ್ಲಿಯೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು , ನಿನ್ನೆ ರಾತ್ರಿಯೇ ಚಿತ್ರದ ಎಲ್ಲಾ ಟಿಕೆಟ್ ಸೋಲ್ಡ್ ಓಟ್ ಆಗುವ ಮೂಲಕ ತುಳು ಚಿತ್ರರಂಗದಲ್ಲಿ ಹೊಸ ದಾಖಲೆ ಅಲೆಯನ್ನು ಸೃಷ್ಠಿಸಿದೆ ಗಿರಿಗಿಟ್ ಆಗಿದೆ.
ಒಂದೇ ದಿನದಲ್ಲಿ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 95 ಕ್ಕೂ ಅಧಿಕ ಪ್ರದರ್ಶನಗೊಂಡು ದಾಖಲೆ ನಿರ್ಮಿಸಿದ್ದು, ಒಂದು ಒಳ್ಳೆಯ ಚಿತ್ರ ತೆರೆಕಂಡರೆ ಅದನ್ನು ಅಭಿಮಾನಿಗಳು ಎಂದೂ ಕೈ ಬಿಡುವುದಿಲ್ಲ ಅನ್ನೋ ಮಾತಿಗೆ ಗಿರಿಗಿಟ್ ಸಾಕ್ಷಿಯಾಗಿದ್ದು, ಕರಾವಳಿಯ ಜನರು ಈ ಚಿತ್ರಕ್ಕೆ ಫಿದಾ ಆಗಿದ್ದಾರೆ. ನಟ, ನಿರ್ದೇಶಕ ರೂಪೇಶ್ ಶೆಟ್ಟಿ, ರಾಕೇಶ್ ಕದ್ರಿ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರ ಜನರನ್ನು ಮನರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಚಿತ್ರದಲ್ಲಿ ರೂಪೇಶ್ ಶೆಟ್ಟಿ ಹಾಗೂ ಶಿಲ್ಪಾ ಶೆಟ್ಟಿ ಜೋಡಿ ಪ್ರೇಕ್ಷಕ್ಷರಿಗೆ ಇಷ್ಟವಾದ್ರೆ ಖಳನಾಯಕನಾಗಿ ರೋಶನ್ ಶೆಟ್ಟಿ ಗತ್ತು ಗಾಂಭಿರ್ಯದಿಂದಲೇ ಪ್ರೇಕ್ಷಕರ ಮನಗೆಲ್ಲುತ್ತಾರೆ. ಪ್ರಸನ್ನ ಶೆಟ್ಟಿ ಬೈಲೂರು ಬರೆದ ಸಂಭಾಷಣೆಗೆ ಪ್ರೇಕ್ಷಕರ ಶಿಳ್ಳೆ ಉತ್ತರವಾಗುತ್ತದೆ. ನವೀನ್ ಡಿ. ಪಡೀಲ್,ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಉಮೇಶ್ ಮಿಜಾರ್, ಪ್ರಸನ್ನ ಶೆಟ್ಟಿಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು ಮುಂತಾದ ಹಾಸ್ಯ ಕಲಾವಿದರ ದಂಡೇ ಇದ್ದು ಕಾಮಿಡಿ ಕಲಾವಿದರು ವಿಭಿನ್ನ ಪಾತ್ರಗಳ ಮೂಲಕ ಗಮನಸೆಳೆದಿದ್ದಾರೆ. ಈ ರೀತಿಯಾಗಿ ಚಿತ್ರದುದ್ದಕ್ಕೂ ಹಾಸ್ಯದ ರಸದೌತಣ ನೀಡುತ್ತಿದ್ದು, ಸಿನಿಮಾದ ಪಂಚಿಂಗ್ ಡೈಲಾಗ್ ಗಳಂತೂ ಎಲ್ಲರ ಬಾಯಲ್ಲಿ ಕೇಳಿ ಬರುತ್ತಿದೆ.
ಜೊತೆಗೆ ಯು.ಎ.ಇ., ಕತಾರ್, ಒಮನ್ ದೇಶಗಳಲ್ಲಿ ಈ ಚಿತ್ರ ಬಿಡುಗಡೆಗೊಂಡಿದ್ದು, ವಿದೇಶಗಳಲ್ಲಿ ತೆರೆಕಂಡ ಕೋಸ್ಟಲ್ ವುಡ್ ನ ಮೊದಲ ಚಿತ್ರ.