ಮುಂಬೈ,ಆ 19 (Daijiworld News/RD): ಬಾಲಿವುಡ್ ಖ್ಯಾತ ನಟಿ ಶಿಲ್ಪಾ ಶೆಟ್ಟಿ ತನ್ನ ಫಿಟ್ ನೆಸ್ ಮೂಲಕ ತನ್ನ ಸೌಂದರ್ಯವನ್ನು ಕಾಪಾಡಿಕೊಳ್ಳುತ್ತಿದ್ದು, ಇದೀಗ ಫಿಟ್ ನೆಸ್ ಗೆ ಸಂಬಂಧಿಸಿದ ಕಂಪೆನಿಯೊಂದು ಪ್ರಚಾರದ ರಾಯಭಾರಿಯನ್ನಾಗಿ ನೇಮಿಸಿದ್ದು, 10 ಕೋಟಿ ಆಫರ್ ನೀಡಿತ್ತು ಆದರೆ ಶಿಲ್ಪಾ ಶೆಟ್ಟಿ ಈ ಆಫರ್ ಅನ್ನು ನಿರಾಕರಿಸಿದ್ದಾರೆ. ಜಾಹಿರಾತಿನ ಮೂಲಕ ಜನರಿಗೆ ತಪ್ಪು ಸಂದೇಶ ನೀಡುವಂತಹ ಕೆಲಸ ನಾನು ಮಾಡುವುದಿಲ್ಲ, ನನ್ನ ಆತ್ಮಸಾಕ್ಷಿ ಒಪ್ಪುವುದಿಲ್ಲ ಎಂದು ಆಫರ್ ನಿರಾಕರಿಸಿದ್ದಕ್ಕೆ ಪ್ರತಿಕ್ರಿಯಿಸಿದ್ದಾರೆ.
ಜನಪ್ರಿಯ ಆಯುರ್ವೇದ ಕಂಪೆನಿಯೊಂದು ಸ್ಲಿಮ್ಮಿಂಗ್ ಪಿಲ್ಸ್ (ತೆಳ್ಳಗಾಗಲು ಬಳಸುವ ಮಾತ್ರೆಗಳು) ಎಂಬ ಉತ್ಪನ್ನದ ಬಗ್ಗೆ ಪ್ರಚಾರದ ರಾಯಭಾರಿಯಾಗುವಂತೆ ₹ 10 ಕೋಟಿ ಆಫರ್ ನೀಡಿದ್ದು, ಆದರೆ ಶಿಲ್ಪಾ ಶೆಟ್ಟಿ ಅದನ್ನು ನಿರಾಕರಿಸಿದ್ದಾರೆ. ಈ ಜಾಹಿರಾತಿನಲ್ಲಿರುವ ವಿಚಾರಗಳು ನಂಬುವುದಕ್ಕೆ ಅಸಾಧ್ಯವಾದುದು ಎಂದು ಹೇಳಿದ್ದಾರೆ.
ದೇಹದ ಫಿಟ್ ನೆಸ್ ಕಾಪಾಡುವುದು ನಮ್ಮ ಆಹಾರ ಪದ್ಧತಿಯಲ್ಲಿ ಅಡಕವಾಗಿರುತ್ತದೆ ಹೊರತು, ಮಾತ್ರೆಗಳನ್ನು ತಿನ್ನುವ ಮೂಲಕ ಅಲ್ಲ. ನಾವು ತಿನ್ನುವ ಆಹಾರ ಮತ್ತು ಪ್ರತಿದಿನದ ಮಾಡುವ ವ್ಯಾಯಮ ಮಾಡಿದಾಗ ಮಾತ್ರ ದೈಹಿಕವಾಗಿ ಫಿಟ್ ನೆಸ್ ಆಗಿ ಇರುತ್ತೇವೆ ಎಂದರು. ಸಹಜವಾಗಿ ತೂಕ ಕಡಿಮೆಯಾಗಬೇಕೇ ಹೊರತು ಮಾತ್ರೆ ಸೇವಿಸುವುದರಿಂದ ಅಲ್ಲ. ಆ ಕಂಪನಿ ಆಫರ್ ನಿರಾಕರಿಸದೆ, ಒಪ್ಪುತ್ತಿದ್ದರೂ ನನ್ನ ಆತ್ಮಸಾಕ್ಷಿಗೆ ದ್ರೋಹ ಮಾಡಿದಂತೆ ಆಗುತ್ತದೆ. ಹಾಗಾಗಿ ಆ ಕೆಲಸ ಇಷ್ಟವಾಗಲಿಲ್ಲ ಇದರಿಂದಾಗಿ ಈ ಆಫರ್ ಅನ್ನು ನಿರಾಕರಿಸಿದೆ ಎಂದು ಹೇಳಿದ್ದಾರೆ.