ಮಂಗಳೂರು,ಆ 17 (Daijiworld News/RD): ಕೋಸ್ಟಲ್ ವುಡ್ ನಲ್ಲಿ ಬಹಳಷ್ಟು ನಿರೀಕ್ಷೆ ಮೂಡಿಸಿ, ಹಾಸ್ಯದ ಹೊನಲಲ್ಲಿ ಸಾಗಿಸಿದ ಚಿತ್ರಗಳಲ್ಲಿ ಎಕ್ಕ ಸಕ್ಕ, ಪಿಲಿಬೈಲ್ ಯಮುನಕ್ಕ, ಅಮ್ಮೆರ್ ಪೊಲೀಸಾ ಕೂಡ ಆಗಿದ್ದು. ಈ ಚಿತ್ರಗಳು ಕೋಸ್ಟಲ್ ವುಡ್ ನಲ್ಲಿ ಭಾರೀ ಸದ್ದು ಮಾಡುವ ಮೂಲಕ ಸಿನಿರಸಿಕರಿಂದ ಒಳ್ಳೆಯ ಮೆಚ್ಚುಗೆ ಪಡೆದಿತ್ತು. ಇದೀಗ ಈ ಹಿಟ್ ಚಿತ್ರಗಳನ್ನು ನಿದೇರ್ಶನ ಮಾಡಿ ರಂಜಿಸಿದ ಸೂರಜ್ ಶೆಟ್ಟಿ ನಿರ್ದೇಶನದಲ್ಲಿ ಇಂಗ್ಲೀಷ್ ಚಿತ್ರ ಕರಾವಳಿಗೆ ಎಂಟ್ರಿ ನೀಡಲು ಸಜ್ಜಾಗಿದೆ.
ಚಿತ್ರದಲ್ಲಿ ಪಿಲಿಬೈಲ್ ಯಮುನಕ್ಕ ಖ್ಯಾತಿಯ ಪೃಥ್ವಿ ಅಂಬರ್ ನಾಯಕನಾಗಿ ನಟಿಸಿದ್ದು, ಅವರಿಗೆ ಜೋಡಿಯಾಗಿ ನವ್ಯಾ ಪೂಜಾರಿ ಅಭಿನಯಿಸಿದ್ದಾರೆ. ಇನ್ನು ಈ ಚಿತ್ರಕ್ಕೆ ಕದ್ರಿ ಮಣಿಕಾಂತ್ ಸಂಗೀತ ನೀಡಿದ್ದು, ಶಶಿರಾಜ್ ಕಾವೂರು ಹಾಗೂ ಅರ್ಜುನ್ ಲೂಯಿಸ್ ಸಾಹಿತ್ಯ ನೀಡಿದ್ದು, ಮನು ಸಂಕಲನ ಮಾಡಿದ್ದಾರೆ. ಜೊತೆಗೆ ಕೃಷ್ಣ ಸಾರಥಿ ಚಿತ್ರಕ್ಕೆ ಛಾಯಾಗ್ರಹಣ ನೀಡಿದ್ದಾರೆ. ಚಿತ್ರಕ್ಕೆ ಕನ್ನಡದ ಮಾಚ್ 22, ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಚಿತ್ರಗಳ ನಿರ್ಮಾಪಕ ಹರೀಶ್ ಶೇರಿಗಾರ್ ನಿರ್ಮಾಪಕರಾಗಿದ್ದಾರೆ.
ಮ ಸಿನಿಮಾದ ಶೂಟಿಂಗ್ ಮುಗಿಸಿದ ಚಿತ್ರ ತಂಡ, ಒಟ್ಟು ನಾಲ್ಕು ಹಾಡುಗಳಿದ್ದು, ಇನ್ನು ಬಾಕಿ ಉಳಿದ ಎರಡು ಹಾಡುಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ. ವಿಭಿನ್ನ ಟೈಟಲ್ ಮೂಲಕ ಸಿನಿಪ್ರಿಯರಿಗೆ ನಿರೀಕ್ಷಯನ್ನು ಹುಟ್ಟಿಸುವ ಸೂರಜ್ ಶೆಟ್ಟಿ, ಇದೀಗ ಸಿನಿಮಾದ ಎಡಿಟಿಂಗ್ ಪೂರ್ಣಗೊಳಿಸಿದೆ. ನವೀನ್ ಡಿ ಪಡೀಲ್, ಅರವಿಂದ ಬೋಳಾರ್ , ಭೋಜರಾಜ ವಾಮಂಜೂರು, ದೀಪಕ್ ರೈ, ಪಾಣಾಜೆ, ವಿಸ್ಮಯ ವಿನಾಯಕ್, ಸಂದೀಪ್ ಶೆಟ್ಟಿ, ಪ್ರಸನ್ನ ಬೈಲೂರು ಸಹಿತ ತುಳುನಾಡಿನ ಹಾಸ್ಯ ಹಾಗೂ ಸ್ಟಾರ್ ಕಲಾವಿದರ ಬಳಗನ್ನು ಒಳಗೊಂಡ ಈ ಚಿತ್ರ ತಂಡ, ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆಯನ್ನು ಹುಟ್ಟಿಸಿದೆ.